ಮಕ್ಕಳ ಕವಿತೆ: ಮಕ್ಕಳ ಮಂದಾರ

– ವೆಂಕಟೇಶ ಚಾಗಿ.

ಮಕ್ಕಳ ಮನಸೇ ಸ್ವಚ್ಚಂದ
ಮಕ್ಕಳು ನಲಿದರೆ ಆನಂದ
ಮಕ್ಕಳು ಮನೆಗೆ ಶ್ರುಂಗಾರ
ಮಕ್ಕಳೇ ದೇಶದ ಬಂಡಾರ

ಹೂವಿನ ಮನಸು ಮಕ್ಕಳಲಿ
ಬೆರೆಯುವ ಬಯಕೆ ಅವರಲ್ಲಿ
ಮಕ್ಕಳು ಇದ್ದರೆ ಮನೆ ಚಂದ
ಮಕ್ಕಳು ನಲಿದರೆ ಜಗ ಚಂದ

ಬಗೆಬಗೆ ಹೂಗಳ ಲೋಕದಲಿ
ಕಾಮನಬಿಲ್ಲಲಿ ಜಾರುತಲಿ
ಗಿಡಮರ ಸುಂದರ ಹಸಿರಿನಲಿ
ಮಕ್ಕಳು ಹರುಶದಿ ನಲಿಯಲಿ

ಮಕ್ಕಳು ತೋಟದ ಹೂವುಗಳು
ಬೇದವ ತೋರದ ಮನಸುಗಳು
ಮಕ್ಕಳೇ ನಮ್ಮ ದೇಶದ ಆಸ್ತಿ
ಮಕ್ಕಳು ಅರಳಲು ದೇಶಕೆ ಶಕ್ತಿ

ಮಕ್ಕಳು ನಲಿಯುತ ಬೆಳೆಯಲಿ
ಮಕ್ಕಳು ಒಳ್ಳೆಯದನ್ನೆ ಕಲಿಯಲಿ
ಮಕ್ಕಳ ಲೋಕಕೆ ಸ್ವಾಗತ
ಶಾಂತಿಯ ಲೋಕದಿ ಬಾಳುತ

(ಚಿತ್ರಸೆಲೆ: matthewfray.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: