ಡ್ರೈ ಜಾಮೂನು

– ಶ್ಯಾಮಲಶ್ರೀ.ಕೆ.ಎಸ್.

ಏನೇನು ಬೇಕು

  • ಜಾಮೂನ್ ಪುಡಿ (instant) – 200 ಗ್ರಾಂ
  • ಹಾಲಿನ ಕೋವಾ (Milk khoa) – 50 ಗ್ರಾಂ
  • ಹಾಲು ಬೇಕಾದಶ್ಟು
  • ಎಣ್ಣೆ ಬೇಕಾದಶ್ಟು
  • ಒಣ ಕೊಬ್ಬರಿ ಪುಡಿ
  • ಸಕ್ಕರೆ – 1 ½ ಬಟ್ಟಲು
  • ನೀರು – 1 ½ ಬಟ್ಟಲು
  • ಏಲಕ್ಕಿ – ಸ್ವಲ್ಪ

ಮಾಡುವ ಬಗೆ

ಮೊದಲಿಗೆ ನೀರನ್ನು ಕುದಿಯಲು ಬಿಡಿ, ನಂತರ ಸಕ್ಕರೆ ಸೇರಿಸಿ ಅದು ಕರಗುವವರೆಗೆ ಚೆನ್ನಾಗಿ ಕುದಿಸಿ, ಏಲಕ್ಕಿ ಪುಡಿ ಸೇರಿಸಿ. ಸಕ್ಕರೆ ಪಾಕ ಸಿದ್ದವಾಗುತ್ತದೆ (ಪಾಕ ಸ್ವಲ್ಪ ಮಂದವಾಗಿರಲಿ), ತಣ್ಣಗಾಗಲು ಬಿಡಿ.

ಜಾಮೂನು ಪುಡಿಗೆ ಹಾಲಿನ ಕೋವಾವನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಬಳಿಕ ಹಾಲು ಅತವಾ ನೀರನ್ನು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಮ್ರುದುವಾಗಿ ನಾದಿಕೊಂಡು ಸ್ವಲ್ಪ ಹೊತ್ತು ಹಾಗೆಯೇ ಇಡಿ. ನಂತರ ಅಂಗೈಗೆ ತುಪ್ಪ ಇಲ್ಲವೇ ಎಣ್ಣೆ ಸವರಿಕೊಂಡು ಜಾಮೂನಿನ ಉಂಡೆಗಳನ್ನು ಮಾಡಿ. ಎಣ್ಣೆ ಬಿಸಿಯಾದ ಮೇಲೆ ನಿದಾನವಾಗಿ ಉಂಡೆಗಳನ್ನು ಹಾಕಿ ಕಡಿಮೆ ಉರಿಯಲ್ಲಿ ಕರಿದಿಟ್ಟುಕೊಳ್ಳಿ. ಬಳಿಕ ಕರಿದಿಟ್ಟ ಉಂಡೆಗಳನ್ನು ಸಕ್ಕರೆ ಪಾಕಕ್ಕೆ ಹಾಕಿ ಸ್ವಲ್ಪ ಹೊತ್ತು (ಸುಮಾರು ಹತ್ತು ನಿಮಿಶ) ನೆನೆಯಲು ಬಿಡಿ. ನಂತರ ಪಾಕದಿಂದ ಹೊರತೆಗೆದು ಒಣ ಕೊಬ್ಬರಿ ಪುಡಿಯಲ್ಲಿ ಹೊರಳಾಡಿಸಿ ಇಟ್ಟರೆ ಡ್ರೈಜಾಮೂನು ಸಿದ್ದವಾಗುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: