ಕವಿತೆ: ಅವಳು

– .

ಮನದಾಳದ ಬಯಕೆಗಳೆಲ್ಲ
ಬೂದಿ ಮುಚ್ಚಿದ ಕೆಂಡದಂತೆ
ತನ್ನೊಳಗೊಳಗೆ ಸುಡುತ್ತಿದ್ದರೂ
ಮುಗುಳ್ನಗಯೊಂದಿಗೆ ಸಾಗುವಳು

ತನ್ನಿಚ್ಚೆಯಂತೇನು ನಡೆಯದಿದ್ದರೂ
ಸಂಸಾರ ನೊಗವ ಹೊತ್ತುಕೊಂಡು
ತನ್ನವರಿಗಾಗಿ ಗಾಣದ ಎತ್ತಿನಂತೆಯೇ
ಹಗಲಿರುಳೆನ್ನದೆ ದುಡಿಯುವಳು

ಯಾರಲ್ಲೂ ಏನನ್ನೂ ಬೇಡದೆ
ಇರುವುದರಲ್ಲಿಯೇ ಅರಿತು
ನಿಸ್ವಾರ‍್ತಿಯಾಗಿ ಜಗದೊಳಗೆ
ಬಾಳಿಗೆ ಜ್ಯೋತಿಯಾಗಿರುವಳು

ನಿತ್ಯ ನೂರಾರು ಜಂಜಾಟಗಳಿಗಂಜದೆ
ಸತ್ಯ ದರ‍್ಮ ನ್ಯಾಯ ಮಾರ‍್ಗ ಬಿಡದೇ
ಕಶ್ಟ ಕಾರ‍್ಪಣ್ಯದ ಮುಳ್ಳಿನ ಬೇಲಿಯಲ್ಲಿ
ಅರಳಿ ನಗುತಿರುವ ಗುಲಾಬಿ ಹೂವಿವಳು

ಹುಟ್ಟಿ ಬೆಳೆದ ತವರೂರು ಮನೆಗೂ
ಕರಿಮಣಿ ಮಾಲೀಕನ ವಂಶಕ್ಕೂ
ಯಾವುದೇ ಕಳಂಕವೂ ಬಾರದಂತೆ
ಜೀವನದುದ್ದಕ್ಕೂ ಜೀವವೇ ತೇಯ್ದವಳು

(ಚಿತ್ರ ಸೆಲೆ: artponnada.blogspot.in )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Raghuramu N.V. says:

    ಚೆನ್ನಾಗಿದೆ

ಅನಿಸಿಕೆ ಬರೆಯಿರಿ:

Enable Notifications