ಹನಿಗವನಗಳು

– ಕಿಶೋರ್ ಕುಮಾರ್.

*** ಮುಗ್ದತೆ ***

ಮಗುವಿನ ಮೊಗವು
ತುಳುಕುವ ಚೆಲುವು
ಮಗುವಿನ ನಗುವು
ಮುಗ್ದತೆಯ ಹೂವು

*** ಬಾಳಿಗೆ ದಾರಿ ***

ಶಾಲೆಯ ದಿನಗಳವು
ಕಲಿಕೆಯಲಿ ಮೊದಲಾಗಿ
ಆಟದಲಿ ಕೊನೆಯಾದವು
ಬಾಳಿಗೆ ದಾರಿಯಾದವು

*** ಸಡಗರ ***

ಹಬ್ಬವೆಂದರೆ ಸಂತಸ
ಹೊಸ ಬಟ್ಟೆಗಳ ಸಂಬ್ರಮ
ಹಬ್ಬವೆಂದರೆ ಸಡಗರ
ತಿಂಡಿ ಸಿನಿಸುಗಳ ಆಗರ

*** ಚಳಿಗಾಲ ***

ಉರಿಬಿಸಿಲ ಬೇಸಿಗೆಯ ಸರಿಸಿ
ಎಂದು ಬರುವುದೋ ಮಳೆಗಾಲ
ತಂಪಾದ ಗಾಳಿಯೊಂದಿಗೆ
ಮುದ ನೀಡುವ ತಣ್ಣನೆಯ ಚಳಿಗಾಲ

(ಚಿತ್ರಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *