ಕವಿತೆ: ಬದುಕಿನ ಚೆಲುವು

– ಕಿಶೋರ್ ಕುಮಾರ್.

ಒಲವು, ಪ್ರೀತಿ, Love

ದಿನಗಳವು ಕಳೆದವು
ಬಲು ಸಂತಸದಿ
ಮುಂದೆಯೂ ಸಾಗುವ
ಅದೇ ಹರುಶದಿ

ನಿಂತಲ್ಲೇ ನಲಿದೆನು
ನಿನ ನಗೆಯ ಕಂಡು
ನೋಡುತಲೆ ಬೆರಗಾದೆನು
ನಿನ ಚೆಲುವ ಕಂಡು

ಬೇಸಿಗೆಯು ಕಳೆದಂತೆ
ಮಳೆಗಾಲವು ಬರದೆ
ಈ ವಿರಹ ಕೊನೆಯಾಗಿ
ಒಲವಾಗಿ ಬರದೆ

ಅಂದ ಚಂದವಲ್ಲ
ಅದು ಮನದಾಳದ ಒಲವು
ಒಲವು ಬೇವು ಬೆಲ್ಲ
ಇದೇ ಬದುಕಿನ ಚೆಲುವು

(ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: