ಬಾವನೆಗಳಿಗೊಂದು ಕಾರಣ ಬೇಕು

 ಡಾ|| ಮಂಜುನಾತ ಬಾಳೇಹಳ್ಳಿ.

feeling

ಬಾವನೆಗಳಿಗೊಂದು ಕಾರಣ ಬೇಕು
ಕಾರಣಗಳೇ ಬಾವನೆಗಳಲ್ಲ
ಬಾವಗಳ ಮೂಲ ಅಶ್ಟೆ

ರುಶಿಮೂಲ ನದಿಮೂಲ
ಸಾಹಿತ್ಯದ ಮೂಲ
ನಿಗೂಡ, ಅಶ್ಟೇ ನಿಕರ

ವ್ಯಕ್ತಿ ಮುಕ್ಯವಲ್ಲ
ಅಬಿವ್ಯಕ್ತಿ ಮುಕ್ಯ
‘ಬೂತ’ ಮುಕ್ಯವಲ್ಲ
ಅನುಬೂತಿ ಮುಕ್ಯ

ದೈವ ಮುಕ್ಯವಲ್ಲ
ದೈವದ ಬಕ್ತಿ ಮುಕ್ಯ
ಹಬ್ಬ ಮುಕ್ಯವಲ್ಲ
ಹಬ್ಬದ ಸಂಬ್ರಮ ಮುಕ್ಯ

ಹೂವ ಮಕರಂದ ಸಾಕು
ದುಂಬಿಗೆ, ಹೂವೇ ಬೇಕಿಲ್ಲ
ಕವನಗಳ ಬಾವನೆ ಸಾಕು
ಅವುಗಳ ಮೂಲ ಬೇಕೇ?

( ಚಿತ್ರ ಸೆಲೆ:  myphotobookmd.wordpress.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: