ಮೈದುಂಬಿ ಹರಿಯುತಿದೆ ಹೊನಲು

– ಅಜಿತ್ ಕುಲಕರ‍್ಣಿ.

honalu3

ಮೈದುಂಬಿ ಹರಿಯುತಿದೆ ಹೊನಲು
ಹರಿಯುವೆಡೆಯಲ್ಲೆಲ್ಲ ಕನ್ನಡವೇ ಮೊದಲು
ಮೈದುಂಬಿ ಹರಿಯುತಿದೆ ಹೊನಲು

ಹೊಳೆಯಾಗಿ ಹರಿಯುತಿದೆ
ಅರಿವಿನಾಳದ ತಳಕೆ
ಎಲರಾಗಿ ಬೀಸುತಿದೆ
ಏರುಗೈಮೆ ಗಳ ಏರಿಗೆ

ನೀರಾಗಿ ಹರಿಯುತಿದೆ
ಜಗವನ್ನೇ ಅಪ್ಪುತಾ
ಎಲ್ಲ ಸೊಗವ ತನ್ನೊಡಲಿಗೆ ತುಂಬಿ ಕೊಂಡು
ಕನ್ನಡವ ಮೆರೆಯುತಾ

ಬೀರುತಿದೆ ಬೆಳಕ
ಬಗೆಗಣ್ಣ ತೆರೆಸಿ
ಬಗೆಯ ಕಸರು
ಕೊಳಕುಗಳನೆಲ್ಲ ಗುಡಿಸಿ

ಇಂದಿಗೆ ಮೂರೇಡಿನ ಗೆರೆಯನ್ನು ದಾಟಿ
ನಾಲೇಡಿಗೆ ದಾಪುಗಾಲಿಡುತ್ತ
ನಾಡೇಳಿಗೆಗೆ ದುಡಿವ ಮಿಂಬಾಗಿಲಾಗಿ
ನುಡಿತಾಯಿ ಮೊಗದಲಿ ನಗು ಅರಳಿಸುವತ್ತ

ಮೈದುಂಬಿ ಹರಿಯುತಿದೆ ಹೊನಲು
ಹರಿಯುವೆಡೆಯಲ್ಲೆಲ್ಲ ಕನ್ನಡವೇ ಮೊದಲು
ಮೈದುಂಬಿ ಹರಿಯುತಿದೆ ಹೊನಲು

(ಏರುಗೈಮೆ = ಸಾದನೆ, ಏಡು = ವರುಶ )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Gs ಶೇಖರ says:

    ಅದ್ಬುತ ??

ಅನಿಸಿಕೆ ಬರೆಯಿರಿ: