‘ನೋಬೆಲ್’ – ಗೊತ್ತಿರದ ಕೆಲ ಸಂಗತಿಗಳು

 ವಿಜಯಮಹಾಂತೇಶ ಮುಜಗೊಂಡ.

large-nobel-chemistry-medal

ಹಿಟ್ಲರ್‌ನನ್ನೂ ನೋಬೆಲ್‍ ಪ್ರಶಸ್ತಿಗಾಗಿ ಹೆಸರಿಸಿದ್ದರು!

ನೋಬೆಲ್ ಶಾಂತಿ ಪ್ರಶಸ್ತಿಗಾಗಿ ಜರ‍್ಮನಿಯ ನಾಜಿ ಸರ‍್ವಾದಿಕಾರಿ ಅಡಾಲ್ಪ್ ಹಿಟ್ಲರ್‍ನ ಹೆಸರನ್ನು ಸೂಚಿಸಲಾಗಿತ್ತು ಎನ್ನುವ ವಿಶಯ ನಿಮಗೆ ಗೊತ್ತೇ? ಹೌದು, ಇದನ್ನು ನೀವು ನಂಬಲೇಬೇಕು. ಸ್ವೀಡನ್‍‍ನ ಪಾರ‍್ಲಿಮೆಂಟಿನಲ್ಲಿ ಜನ ಪ್ರತಿನಿದಿಯಾಗಿದ್ದ ಎರಿಕ್ ಗಾಟ್‍ಪ್ರಿಡ್ಡ್ ಕ್ರಿಶ್ಟಿಯಾನ್ ಬ್ರಾನ್ಟ್ ಅವರು ಹಿಟ್ಲರ್‍ನ ಹೆಸರನ್ನು 1939ರಲ್ಲಿ ನೋಬೆಲ್ ಪ್ರಶಸ್ತಿಗಾಗಿ ಶಿಪಾರಸು ಮಾಡಿದ್ದರಂತೆ! ನಾಡುಗಳ ನಡುವಿನ ಸಂಬಂದ ಗಟ್ಟಿಗೊಳಿಸಿದ್ದಕ್ಕಾಗಿ ಮತ್ತು ಜಾಗತಿಕ ನಿಶ್ಶಸ್ತ್ರೀಕರಣವನ್ನು ಬೆಂಬಲಿಸಿದ್ದರು ಎನ್ನುವ ಕಾರಣ ನೀಡಿ ಹಿಟ್ಲರ್‍ನ ಹೆಸರನ್ನು ಸೂಚಿಸಿದ್ದರು. ಬಳಿಕ ಅದೊಂದು ಅಣಕ ಎಂದು ಹೇಳಿ ಹಿಟ್ಲರ್‍ನ ಹೆಸರನ್ನು ಹಿಂಪಡೆದರಂತೆ!

ಮರಣೋತ್ತರ  ನೋಬೆಲ್‌ ಕೊಡಲ್ಲ, ಆದರೂ…

‘ಸಾದನೆಗೈದ ವ್ಯಕ್ತಿಯು ಬದುಕಿದ್ದರೆ ಮಾತ್ರ ಅವರ ಹೆಸರನ್ನು ನೋಬೆಲ್ ಪ್ರಶಸ್ತಿಗೆ ಪರಿಗಣಿಸಬೇಕು’ ಎನ್ನುವ ಕಟ್ಟಳೆಯನ್ನು 1974ರಲ್ಲಿ ನೋಬೆಲ್ ಪೌಂಡೇಶನ್‍ನವರು ಹಾಕಿಕೊಂಡರು. 2011ರಲ್ಲಿ, ನೋಬೆಲ್‍ನ ಇತಿಹಾಸದಲ್ಲಿ ಈ ಕಟ್ಟಳೆಯನ್ನು ಮುರಿದ ಒಂದು ಗಟನೆ ನಡೆಯಿತು. ರಾಲ್ಪ್ ಸ್ಟೇನ್‍ಮನ್ ಅವರಿಗೆ ಮಾಂಜರಿಮೆಗಾಗಿ(medicine) ನೀಡಲಾಗುವ ನೋಬೆಲ್ ಪ್ರಶಸ್ತಿ ಪ್ರಕಟಿಸುವ ಕೆಲವೇ ದಿನಗಳ ಮೊದಲು ಅವರು ಸತ್ತಿದ್ದರು. ಪ್ರಶಸ್ತಿ ಪ್ರಕಟಿಸುವ ಹೊತ್ತಿನಲ್ಲಿ ಅವರು ಸತ್ತಿದ್ದು ನೋಬೆಲ್ ನೀಡುವವರಿಗೆ ಗೊತ್ತೇ ಇರಲಿಲ್ಲ!  ನೋಬೆಲ್ ಪ್ರಶಸ್ತಿ ಪ್ರಕಟವಾದ ಬಳಿಕ ಅದನ್ನು ಹಿಂಪಡೆಯುವುದಿಲ್ಲ. ಹೀಗಾಗಿ ನೋಬೆಲ್ ಬಹುಮಾನದ ದುಡ್ಡನ್ನು ರಾಲ್ಪ್ ಸ್ಟೇನ್‍ಮನ್‍ರ ಸಂಪತ್ತಿಗೆ ಸೇರಿಸಲಾಯಿತು.

ನೋಬೆಲ್ ಪ್ರಶಸ್ತಿಗೆ ಸಲ್ಲಿಕೆಯಾದ ಹೆಸರುಗಳನ್ನು ಗುಟ್ಟಾಗಿಡಲಾಗುತ್ತದೆ!

ಪ್ರತಿ ವರುಶ ಹಲವು ಸಾವಿರ ವಿಶ್ವವಿದ್ಯಾಲಯಗಳ ಕಲಿಸುಗರು, ಆಯಾ ವಲಯಗಳಲ್ಲಿ ಕೆಲಸಮಾಡಿದ ನಿಪುಣರು ಮತ್ತು ಸರಕಾರಿ ಸಂಸ್ತೆಗಳಿಂದ ನೋಬೆಲ್‍ ಪ್ರಶಸ್ತಿಗಾಗಿ ಹೆಸರುಗಳನ್ನು ಪಡೆಯುತ್ತಾರೆ. ಹೀಗೆ ಬಂದ ಹೆಸರುಗಳು ಮತ್ತು ಹೆಸರು ನೀಡಿದವರ ಮಾಹಿತಿಯನ್ನು ತುಂಬಾ ಗುಟ್ಟಾಗಿಡುತ್ತಾರೆ. ನೋಬೆಲ್ ಪೌಂಡೇಶನ್ ಈ ಮಾಹಿತಿಯನ್ನು 50 ವರುಶಗಳ ಬಳಿಕವಶ್ಟೇ ಹೊರಗೆ ಬಿಡುತ್ತಾರೆ. 1965ರ ವರೆಗೆ ನೋಬೆಲ್‍ಗೆ ಸೂಚಿಸಲ್ಪಟ್ಟ ಹೆಸರುಗಳ ಪಟ್ಟಿಯನ್ನು ಇತ್ತೀಚಿಗಶ್ಟೇ ಬಿಡುಗಡೆ ಮಾಡಲಾಗಿದೆ.

“ಹಲೋ! ನೀವು ನೋಬೆಲ್ ಗೆದ್ದಿದ್ದೀರಿ”

2011ರಲ್ಲಿ ನೋಬೆಲ್ ಪಡೆದ ಬಾನರಿಗ(astrophysicist) ಬ್ರಯಾನ್ ಸ್ಮಿತ್(Brian Schmidt) ಅವರ ಮಾತಿನಲ್ಲಿ ಹೇಳುವುದಾದರೆ “ನೋಬೆಲ್ ಪಡೆದವರ ಜೀವನ ರಾತ್ರೋರಾತ್ರಿ ಬದಲಾಗುತ್ತದೆ”. ನೋಬೆಲ್ ಸಿಗುವುದರ ಕುರಿತು ಪ್ರಶಸ್ತಿ ಪ್ರಕಟವಾಗುವ ಮೊದಲು ಯಾವುದೇ ಬಗೆಯ ಮುನ್ನೆಚ್ಚರಿಕೆ ನೀಡಿರುವುದಿಲ್ಲ. ಒಂದು ರಾತ್ರಿ ಅವರು ಅಡುಗೆಗೆ ಅಣಿಮಾಡುತ್ತಿರುವಾಗ ಪೋನ್ ಕರೆಮಾಡಿ, “ಹಲೋ! ನೀವು ನೋಬೆಲ್ ಗೆದ್ದಿದ್ದೀರಿ” ಎಂದು ಹೇಳಿದ್ದರಂತೆ.

ನೋಬೆಲ್ ಪದಕವನ್ನು ನೋಡಿದ ವಿಮಾನ ನಿಲ್ದಾಣದ ಕಾವಲುಗಾರರು ಹೇಳಿದ್ದೇನು?

ಬ್ರಯಾನ್ ಸ್ಮಿತ್ ಅವರಿಗೆ ಆದ ಒಂದು ಅನುಬವ ಬಲು ವಿಚಿತ್ರ. ಅವರು ಒಮ್ಮೆ ಅಮೆರಿಕಾದ ನಾರ‍್ತ್ ಡಕೋಟ ನಾಡಿನ ಪಾರ‍್ಗೋಗೆ ತಮ್ಮ ಅಜ್ಜಿಗೆ ತೋರಿಸಲೆಂದು ನೋಬೆಲ್ ಪದಕವನ್ನು ಕೊಂಡೊಯ್ದಿದ್ದರಂತೆ. “ನೋಬೆಲ್ ಪದಕವನ್ನು ಜೊತೆಗೆ ಕೊಂಡೊಯ್ಯುವುದು ಅಶ್ಟೇನು ವಿಶೇಶವಲ್ಲ, ಆದರೆ ಪಾರ‍್ಗೋನಿಂದ ಹೊರಡುವಾಗ ನಡೆದ ಗಟನೆ ತುಂಬ ವಿಶೇಶ” ಎನ್ನುತ್ತಾರೆ ಬ್ರಯಾನ್.

ಅವರ ಮಡಿಲೆಣ್ಣುಕದ(laptop) ಚೀಲದಲ್ಲಿ ಅವರು ನೋಬೆಲ್ ಪದಕ ಇಟ್ಟುಕೊಂಡಿದ್ದರಂತೆ. ವಿಮಾನ ನಿಲ್ದಾಣದ ಎಕ್ಸ್-ರೇ ಮಶೀನು ಮೂಲಕ ಅವರ ಚೀಲವನ್ನು ಪರೀಕ್ಶಿಸುತ್ತಿದ್ದಾಗ, ಕಪ್ಪು ಬಿಲ್ಲೆಯಂತೆ ಕಂಡ ನೋಬೆಲ್ ಪದಕವನ್ನು ನೋಡಿದ ಕಾವಲುಗಾರರು ಅವರಿಗೆ ಕೇಳಿದರಂತೆ, “ಸರ್, ಇದರಲ್ಲೇನೋ ಇದೆ”. ಅದಕ್ಕವರು, “ಹೌದು, ಇದು ಹೊನ್ನಿನ ಪದಕ” ಎಂದು ನೋಬೆಲ್ ಪದಕವನ್ನು ತೆಗೆದು ತೋರಿಸಿದಾಗ, “ಇದು ಯಾವುದರಿಂದ ಮಾಡಿದ್ದು? ನಿಮಗೆ ಇದನ್ನು ಯಾರು ಕೊಟ್ಟರು? ಏಕೆ ಕೊಟ್ಟರು?” ಹೀಗೆ ಹಲವು ಕೇಳ್ವಿಗಳನ್ನು ಕೇಳಿದರಂತೆ! ಕೊನೆಗೆ ಎಲ್ಲದಕ್ಕೂ ಉತ್ತರಿಸಿ ಮುಗಿಸಿದ ಮೇಲೆ ಇದು ನೋಬೆಲ್ ಪದಕ ಎಂದು ಬ್ರಯಾನ್ ಹೇಳಿದ್ದಕ್ಕೆ ಅವರಲ್ಲೊಬ್ಬ, “ನೀವು ಪಾರ‍್ಗೋದಲ್ಲಿ ಏನು ಮಾಡುತ್ತಿದ್ದಿರಿ?” ಎಂದು ಕೇಳುವುದೇ!?

(ಮಾಹಿತಿ ಮತ್ತು ಚಿತ್ರ ಸೆಲೆ: buzzfeed.com, msn.com, nobelprize.orgtimesofisrael.com)Categories: ನಾಡು

ಟ್ಯಾಗ್ ಗಳು:, , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s