ಅವಳೇ ಪ್ರತಿ ಬದುಕಿನ ಪ್ರೇರಣ ..

– ಅಮುಬಾವಜೀವಿ.

ತ್ಯಾಗದ ಪ್ರತಿರೂಪ ಇವರು
ಸಹನೆಗೆ ಇವರೇ ತವರು

ಬದುಕಿನ ಏಳುಬೀಳುಗಳನುಂಡು
ಅನುಬವದ ಹೆಮ್ಮರವಾಗಿ ಬೆಳೆದು
ಸಂಬಂದಗಳನು ಸಹನೆಯಲಿ ಬೆಸೆದ
*ಅಜ್ಜಿ* ತ್ಯಾಗಕೆ ಮೇರು ಕತೆಯಾದವಳು

ನವಮಾಸ ಹೊತ್ತು ಹೆರುವಳು
ತನ್ನ ಹಸಿವಿನಲು ನಮ್ಮ ಹಸಿವು ನೀಗಿ
ಕಂದನ ನಗುವಲ್ಲಿ ಎಲ್ಲ ನೋವು ಮರೆವ
*ತಾಯಿ*ಯದು ತ್ಯಾಗದ ಪರಿಪೂರ‍್ಣ ಪಾತ್ರ

ಕರುಳ ಬಳ್ಳಿಯ ನಂಟಿಗಾಗಿ
ಬದುಕಿನಲ್ಲಿ ಎರಡನೇ ತಾಯಾಗಿ
ತನಗೆ ಸಿಕ್ಕಿದುದನೆಲ್ಲಾ ಒಡಹುಟ್ಟಿದವಗಾಗಿ
ಬಿಟ್ಟು ಕೊಡುವ *ಅಕ್ಕ* ತ್ಯಾಗದ ಪ್ರತಿರೂಪ

ತನಗಿಂತ ಮೊದಲು ಹುಟ್ಟಿದವರಿಗೆ
ಅಕ್ಕರೆಯ ಸಕ್ಕರೆ ಬೊಂಬೆಯಾಗಿ
ಎಲ್ಲರ ಮುದ್ದಿನ ಕಣ್ಮಣಿಯಾದ
*ತಂಗಿ* ಎಲ್ಲ ತ್ಯಾಗಕೂ ಸಾಕ್ಶಿಯಾಗುವಳು

ಬಾಳಿನ ಬರವಸೆಯ ಬೆಳಗಾಗಿ
ನಾಳಿನ ನಿರೀಕ್ಶೆಗಳಿಗುತ್ತರವಾಗಿ
ಹೆತ್ತವರ ಪ್ರೀತಿಯ ಸ್ವರೂಪವಾಗಿ
*ಮಗಳು* ತ್ಯಾಗದ ಆಸರೆಯಾದಳು

ಹೆಣ್ಣು ಎನ್ನುವ ತ್ಯಾಗದ ಮೂರ‍್ತಿ
ಅವರಿಂದಲೇ ಪ್ರತಿಯೊಂದು ಕೀರ‍್ತಿ
ಆ ತ್ಯಾಗಮಯಿಗೆ ನನ್ನ ನಮನ
ಅವಳೇ ಪ್ರತಿ ಬದುಕಿನ ಪ್ರೇರಣ

(ಚಿತ್ರ ಸೆಲೆ: artponnada.blogspot.in )Categories: ನಲ್ಬರಹ

ಟ್ಯಾಗ್ ಗಳು:, , , , , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s