ಯಶಸ್ವಿಯಾಗಿ ನಡೆದ ಹೊನಲು ಬಳಕ ಬಿಡುಗಡೆ ಕಾರ‍್ಯಕ್ರಮ

– ಹೊನಲು ತಂಡ.

ಹೊಸತನವನ್ನು ಮೈಗೂಡಿಸಿಕೊಂಡು ಹರಿಯುತ್ತಿರುವ ಹೊನಲು 4 ವರುಶಗಳನ್ನು ಪೂರೈಸಿ 5ನೇ ವರುಶಕ್ಕೆ ಕಾಲಿಟ್ಟಿದೆ. ಈ ಸಂತಸದ ಹೊತ್ತಿನಲ್ಲಿ ನಮ್ಮ ತಾಣದ ಆಂಡ್ರಾಯ್ಡ್ ಬಳಕವನ್ನು(app) ನಿನ್ನೆ ಬೆಂಗಳೂರಿನ ಬಸವನಗುಡಿಯ ಮುನ್ನೋಟ ಹೊತ್ತಗೆ ಮಳಿಗೆಯಲ್ಲಿ ಬಿಡುಗಡೆ ಮಾಡಲಾಯಿತು.

ಹೊನಲಿಗೆ ಬಹಳಶ್ಟು ಬರಹಗಳನ್ನು ಮಾಡಿರುವ ಹಿರಿಯ ಬರಹಗಾರರಾದ ಶ್ರೀ ಸಿ.ಪಿ.ನಾಗರಾಜ ಅವರು ಹೊನಲು ಬರಹಗಾರರ, ಓದುಗರ ಮತ್ತು ಬೆಂಬಲಿಗರ ಸಮ್ಮುಕದಲ್ಲಿ ಹೊನಲು ಆಂಡ್ರಾಯ್ಡ್ ಬಳಕವನ್ನು ಬಿಡುಗಡೆ ಮಾಡಿದರು. ಹೊನಲು ನಡೆಸುಗರಾದ ವಿಜಯ್ ಮಹಾಂತೇಶ್, ರತೀಶ ರತ್ನಾಕರ ಮತ್ತು ಅನ್ನದಾನೇಶ ಶಿ ಸಂಕದಾಳ ಅವರು app ಕುರಿತು, ಹೊನಲಿನ ಕುರಿತು ಮತ್ತು ಹೊನಲು ಸಾಗಿ ಬಂದ ಹಾದಿಯ ಕುರಿತು ಮಾತಾಡಿದರು.

ಹೊನಲು ಬಳಕ ಇಳಿಸಿಕೊಳ್ಳುವುದು ಹೇಗೆ?

ಹೊನಲು ಬಳಕವನ್ನು ಈಗ ಗೂಗಲ್ ಪ್ಲೇ ಸ್ಟೋರ‍್‌ನಿಂದ ಇಳಿಸಿಕೊಂಡು ಅಳವಡಿಸಿಕೊಳ್ಳಬಹುದು. ಇದಕ್ಕಾಗಿ ಈ ಕೆಳಗಿನ ಯಾವುದಾದರೂ ಒಂದು ಬಗೆಯನ್ನು ಬಳಸಬಹುದು.

  • ನಿಮ್ಮ ಚೂಟಿಯುಲಿಯಲ್ಲಿ QR ಕೋಡ್‍ಅನ್ನು ಸ್ಕ್ಯಾನ್ ಮಾಡುವ ಮೂಲಕ ನೇರವಾಗಿ ಗೂಗಲ್ ಪ್ಲೇ ಸ್ಟೋರ‍್‌ಗೆ ಹೋಗಿ ಅಲ್ಲಿಂದ ಹೊನಲು ಬಳಕವನ್ನು ಇಳಿಸಿಕೊಳ್ಳಬಹುದು. ಇವತ್ತು ಹೆಚ್ಚಿನ ಚೂಟಿಯುಲಿಗಳಲ್ಲಿ ಕ್ಯಾಮರಾ ಬಳಸಿ QR ಕೋಡ್‌ಅನ್ನು ಸ್ಕ್ಯಾನ್ ಮಾಡಬಹುದಾಗಿದೆ. ಈ ಪರಿಚೆ(feature) ನಿಮ್ಮ ಚೂಟಿಯುಲಿಯಲ್ಲಿ ಇದ್ದರೆ ಕ್ಯಾಮರಾ ಮೂಲಕ ಕೋಡ್‌ಅನ್ನು ನೋಡಿದರೆ ಅಲ್ಲಿಂದ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹೊನಲು ಬಳಕದ ಪುಟಕ್ಕೆ ಕರೆದೊಯ್ಯುವ ಕೊಂಡಿ ಕಾಣುತ್ತದೆ.
  • ಈ ಕೊಂಡಿಯನ್ನು ಬಳಸಿ ನೇರವಾಗಿ ಗೂಗಲ್ ಪ್ಲೇ ಸ್ಟೋರ‍್‌ನಲ್ಲಿ ಹೊನಲು ಬಳಕದ ಪುಟಕ್ಕೆ ಹೋಗಬಹುದು. ಅಲ್ಲಿಂದ ಹೊನಲು ಬಳಕವನ್ನು ಅಳವಡಿಸಿಕೊಳ್ಳಬಹುದು. ಕಿರುಕೊಂಡಿ – http://bit.ly/HonaluApp
  • ಚೂಟಿಯುಲಿಯಲ್ಲಿ ನೇರವಾಗಿ ಗೂಗಲ್ ಪ್ಲೇ ಸ್ಟೋರ್ ಬಳಕವನ್ನು ತೆರೆದು, ಕನ್ನಡದಲ್ಲಿ ಹೊನಲು ಇಲ್ಲವೇ ಇಂಗ್ಲೀಶಿನಲ್ಲಿ “Honalu” ಎಂದು ಹುಡುಕಿದರೆ ಹೊನಲು ಬಳಕ ಸಿಗುತ್ತದೆ. ಹೊನಲು ತನ್ಗುರುತನ್ನು(logo) ಹೊಂದಿರುವ ಬಳಕವನ್ನು ಅಳವಡಿಸಿಕೊಳ್ಳಬಹುದು.

ಹೊನಲು ಬಳಕವನ್ನು ನಿಮ್ಮ ಆಂಡ್ರಾಯ್ಡ್ ಚೂಟಿಯುಲಿಯಲ್ಲಿ ಅಳವಡಿಸಿಕೊಳ್ಳಿ. ಹೊನಲು ಬಳಕದ ಬಗ್ಗೆ ನಿಮ್ಮ ಪರಿಚಯದವರಿಗೂ ತಿಳಿಸಿ ಅವರಿಗೂ ಬಳಸಲು ಹೇಳಿ. ಹಾಗೇ ನಿಮ್ಮ ಅನಿಸಿಕೆಗಳನ್ನು ನಮಗೆ ತಿಳಿಸಲು ಮರೆಯದಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks