ಜೀವನವೇ ಉಡುಗೊರೆ

– ಸವಿತಾ.

ಬಾವ ಬೆಸೆದಿರೆ
ವಿಚಾರ ಮೇಳೈಸಿರೆ
ಸೊಗಸೊಂದು ಕಾಣುತಿರೆ
ಸಂತಸದ ಹೊನಲು ಹರಿಯುತಿರೆ
ಮೈ ಮನ ಮರೆತಿದೆ

ಸೊಬಗೊಂದು ಮೂಡುತಿರೆ
ಶ್ರುಂಗಾರವ ಹಾಡುತಿರೆ
ಇಬ್ಬನಿಯ ತಂಪೆರೆಯುತಿರೆ
ಸಂಬ್ರಮ ಹಂಚುತಿರೆ
ಲೋಕವ ಮರೆಯುತಿದೆ

ಮದುರತೆ ಆಲಾಪಿಸುತಿರೆ
ಒಲವು ಕೊಂಡಿಯಾಗುತಿರೆ
ಹರುಶವು ಉಕ್ಕಿ ಹರಿಯುತಿರೆ
ಜೀವನವೇ ಉಡುಗೊರೆಯಾದಂತಿರೆ
ಮನವೂ ಉಲ್ಲಾಸದೀ ವಿಜ್ರುಂಬಿಸುತಿದೆ

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: