ಹೇಗೆ ಸಂತೈಸಲಿ ಈ ಮನವ

– ಸುರಬಿ ಲತಾ.

ಏಕಾಂಗಿತನ, Loneliness

ಹೇಗೆ ಸಂತೈಸಲಿ ಈ ಮನವ
ಬಿಟ್ಟು ಕೊಡಲಾಗದು ನನ್ನ ಒಲವ
ಎಲ್ಲರ ವಿರೋದದ ನಡುವೆಯು
ಸಾಗುತಿದೆ ಈ ಒಲವು

ತಪ್ಪಿಲ್ಲವೆಂದು ಹೇಳುತಿದೆ ಮನವು
ಗೆಲುವು ಕಾಣುವೆವಾ ನಾವು?
ಬಯಸೆನು ಒಲವು ಬಿಟ್ಟು ಬೇರೇನೂ
ಸ್ವಾರ‍್ತಿಯಾದೆವಾ ನಾವು?

ನಾ ಅರಿತೆ ಬಿಟ್ಟಿರಲಾರೆ ನೀನು
ನಿನ್ನ ಬಿಟ್ಟಿರಲಾರೆ ನಾನು
ಆದರೂ ಅಡ್ಡಗಟ್ಟುವರಲ್ಲ ನಮ್ಮನ್ನು
ಅವರಾರೂ ಅರಿಯರು ನಮ್ಮನ್ನು

ಬರದ ಸಾವು
ಸಿಗದ ಒಲವು
ಮಾಡುವುದೇನು
ಹೇಳುವೆಯಾ ನೀನು

( ಚಿತ್ರ ಸೆಲೆ:  spectator.com.au )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: