ಹೇಳು ನಾ ಕೆಟ್ಟವಳೇ?

– ಸ್ಪೂರ‍್ತಿ. ಎಂ.

ರುಚಿಸದೆ ಹೊರಗಿನ ಪ್ರಪಂಚ ನನಗೆ
ಇರುವೆನು ನನ್ನ ಪ್ರಪಂಚದೊಳಗೆ
ಹೇಳು ನಾ ಕೆಟ್ಟವಳೇ?

ಹೊರಗಿನ ಪ್ರಪಂಚದ ಹೆಸರ ಕಾಣದೆ
ನನ್ನ ಪ್ರಪಂಚದಿ ಹಸಿರ ಬೆಳೆಸಿರುವೆ
ಹೇಳು ನಾ ಕೆಟ್ಟವಳೇ?

ಹೊರಗಿನ ಪ್ರಪಂಚದ ನೋವಲಿ ಬೆಂದಿರುವೆ
ಒಳಗಿನ ಪ್ರಪಂಚದ ಪ್ರೀತಿಯಲ್ಲಿ ಮಿಂದಿರುವೆ
ಹೇಳು ನಾ ಕೆಟ್ಟವಳೇ?

ಅರಿಯದೆ ನಾನೊಂದು ಗೊಂದಲದಲ್ಲಿ ಸಿಲುಕಿರುವೆ
ಹಾಗಾಗಿ ಈ ಪ್ರಶ್ನೆ ಕೇಳಿರುವೆ
ಹೇಳು ನಾ ಕೆಟ್ಟವಳೇ?

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: