ಮಳೆಯ ಹಾಡು
– ವೆಂಕಟೇಶ ಚಾಗಿ.
ಮೋಡ ಕವಿದಿದೆ ಇಂದು
ಹಾಡಬೇಕಿದೆ ಮಳೆಯ ಹಾಡು
ಇಳೆಯ ಮಡಿಲಿಗೆ ಇಂದು
ಹಸಿರ ಕೊಡುಗೆಯು ನೋಡು
ಮೆಲ್ಲ ಸುಳಿಯುವ ಗಾಳಿ ರಾಗಕೆ
ಉಸಿರ ಸೊಬಗಿನ ಸೋಜಿಗ
ದರೆಯ ತಾಕಿದ ಹನಿಯ ಮಾಲೆಗೆ
ಸ್ವರ‍್ಗ ಸುಂದರ ಈ ಜಗ
ಬೆಂದು ಮುದುಡಿದ ಜೀವಜಾಲಕೆ
ಮರಳಿ ಬಂದಿತು ಚೇತನ
ಹೂವು ಅರಳುವ ಮನದ ಬಾವಕೆ
ಬರುವ ದಿನಗಳೇ ನೂತನ
ಹರಿಯುವ ನದಿಗೆ ನೀರು ತುಂಬಿ
ಹರೆಯು ಮರಳಿತು ಈ ದಿನ
ಹೊಲದ ಪೈರಿಗೆ ಜೀವ ತುಂಬಿ
ಮತ್ತೆ ಕುಣಿಯಿತು ಜನಮನ
ತನ್ನ ಗುಟುಕಿಗೆ ಗಡಿಯ ದಾಟುವ
ಹಕ್ಕಿ ಮರಳಿದೆ ತವರಿಗೆ
ಹಳೆಯ ಗೂಡಲಿ ಹಳೆಯ ಹಾಡನು
ಮರಳಿ ಹಾಡಿದೆ ತೆವಲಿಗೆ
(ಚಿತ್ರಸೆಲೆ: wikimedia)
ಇತ್ತೀಚಿನ ಅನಿಸಿಕೆಗಳು