ಕವಿತೆ: ಮನದನ್ನೆ

– ಕಿಶೋರ್ ಕುಮಾರ್.

 

ಮನಸನು ಮರೆಮಾಚಿ
ಮರೆಯಲಾದೀತೇನು
ಮರೆಯುವ ಮೊಗವೇನು
ಮನದನ್ನೆ ನೀನು

ಮರೆಯಾಗಿ ನಿಂತು ನಲಿದೆ
ಮುದ್ದು ಮೊಗವ ನೋಡಿ
ದಿನಕಳೆದೆ ನಲಿದಾಡಿ
ನನಗದೇ ಬೇಕು ದಿನವಿಡೀ

ಮುಂಗುರುಳ ಸರಿಸಿ
ನೀ ಬೀರಿದ ಕಿರುನಗೆ
ಅದು ನನಗಲ್ಲ ಗೊತ್ತು
ಆದರೂ ಇಳಿದಿಲ್ಲ ಮತ್ತು

ಮುಂಜಾನೆಯ ಬೆಳಕಂತೆ
ಬೆಳಗುವುದು ನಿನ ಮೊಗವು
ಅದೇನು ಮೋಡಿ ಮಾಡಿಹೆ ನೀನು
ನಿನ ಮೊಗವ ಮರೆಯಲಾರೆ ನಾನು.

(ಚಿತ್ರಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: