ಕವಿತೆ: ಪರಶಿವನ ಲೀಲೆ

– ಮಹೇಶ ಸಿ. ಸಿ.

ನಿನ್ನ ನೆನೆಯುತಲಿರಲು
ಮನದ ಮೊಗ್ಗೆಲ್ಲವು ಹೂವು
ರವಿಯ ಕಿರಣ ಸೋಕಿದಾಗ
ಅರಳಿತು ಕಣಗಿಲೆಯ ಹೂವು

ಬಕ್ತಿಯ ಹೂ ಅರಳಲಿ
ಮನದ ಮೂಲೆ ಮೂಲೆಯಲಿ
ಅರ‍್ಪಿಸುವೆ ನಿನ ಪಾದಕೆ
ಮನಪೂರ‍್ವಕ ಬಕ್ತಿಯಲ್ಲಿ

ಮೂರು ದಳದ ಪತ್ರೆಯನ್ನು
ನಿನ್ನ ಮುಡಿಗೆ ಅರ‍್ಪಿಸುವೆ
ನೂರು ಕಶ್ಟ ತೊಡೆದು ನೀನು
ಮೂರು ಕಾಲ ಹರಸು

ತ್ರಿಪುರಸುರನ ಸಂಹರಿಸಿ
ಅಶ್ರುವಿನಿಂದ ಸ್ರುಶ್ಟಿಯಾದ
ಏಕಮುಕ ರುದ್ರಾಕ್ಶಿಯು
ನಿನಗೆ ಪ್ರಿಯವು ಪರಶಿವನೇ

ಅರ‍್ಪಿಸಿದ ವಿಶ್ವಕರ‍್ಮ
ಮೂರು ಗುಣದ ತ್ರಿಶೂಲ ನಿನಗೆ
ಮನಸ್ಸು, ಬುದ್ದಿ, ಅಹಂಕಾರ
ಈಗ ಪರಶಿವನ ಹಿಡಿತದಲ್ಲಿದೆ

ಕೈಯಲ್ಲಿ ಇರುವ ಡಮರು
ಆದ್ಯತ್ಮಿಕ ನುಡಿಯ ನುಡಿಸೆ
ಬ್ರಹ್ಮಾಂಡದ ಸ್ರುಶ್ಟಿ ಹಾಗೂ
ನಿಯಂತ್ರಣವೂ ಶಿವನ ಕೈಲಿದೆ

ನಿನ್ನ ಕೊರಳ ತಂಪು ಮಾಡಿ
ಹೆಡೆ ಎತ್ತಿ ನಗುತಲಿರುವ
ವಿಶವು ಕೆಳಗೆ ಇಳಿಯದಂತೆ
ಕೊರಳಲಿರುವ ವಾಸುಕಿ

ಸ್ರುಶ್ಟಿಯೆಲ್ಲ ನಿನ್ನ ಕೈಲಿ
ನಿನ್ನ ಲೀಲೆ ಅಮರವಿಲ್ಲಿ
ಮುಕ್ತಿ ದೊರೆವ ತನಕ ನಾನು
ಪಾದವಿಡಿದು ಬೇಡುತಿರುವೆನು
ಪರಶಿವನೇ ನಿನ್ನ ಪಾದವಿಡಿದು ಬೇಡುತಿರುವೆನು

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: