ಕಿರುಗವಿತೆಗಳು

– ನಿತಿನ್ ಗೌಡ.

ಮುಂಗುರುಳ ನೋಟ

ನಿನ್ನ ಮುಂಗುರುಳ ನೋಟಕೆ
ಆಗಿರುವೆನು ನಾ ಚಂದಾದಾರ..
ಬಿಡು‌‌ ನೀ, ತುಸು ಬಿಂಕ-ಬಿಗುಮಾನ,
ಸಾಗಲು ನಮ್ಮೀ‌ ಒಲವಿನ‌ ಯಾನ..

ಒಡನಾಟ

ಸಾಗಬೇಕಿದೆ ಬಾಳಪಯಣ ಎಡೆಬಿಡದೆ..
ಏರಿಳಿತಗಳ‌ ಮೀರಿ..
ಏನು ಗಳಿಸಿದರೇನು, ಎಶ್ಟು ಉಳಿಸಿದರೇನು ?
ಉಳಿಯುವುದೇನು‌ ಇಹದ ಗಳಿಕೆ?
ಉಳಿಯುವುದೊಂದೇ ಇಹದಲಿ ಕೊನೆಗದು;
ನಮ್ಮ ನಡುವಣ, ಒಡನಾಟದ ಅನುಬಾವ

ಬೆಳಕಿನ ಹೊನಲು

ಇರಬಹುದೇನೋ ಬೆಳಕಿನ ಹಾದಿಯ‌ ಹೊನಲು!
ಕಾಣಬಹುದೇನೋ ಕೋಲ್ಮಿಂಚು; ಕತ್ತಲೆಯ‌ ಪರದೆಯ‌ ಸರಿಸಲು..
ಇರಲಿ ‌ನಿನ್ನಲಿ, ತನ್ನಂಬಿಕೆಯ ಕದಿರು..
ಹಬ್ಬಿಸುವುದು ಕೊನೆಗದು ಗೆಲುವಿನ ಕಾಡ್ಗಿಚ್ಚು…

ಅತಿ ರೋಚಕ

ನಿನ‌ ನೆನಪೇ, ಅತಿ‌ ರೋಚಕ..
ಕೂಡಿಡುವೆ.. ಅದು‌ವೆ ನಮ್ಮ ಒಲವ ಸೂಚಕ..
ಸಿಗಬೇಕಿದೆ ನನಗೀಗ.. ಪ್ರೀತಿಯ ಪಾರಿತೋಶಕ,
ಇಶ್ಟಾದರು ದಯಪಾಲಿಸು, ಜೊತೆಯಾಗುವ ಕೊನೆಯತನಕ.‌.

( ಚಿತ್ರಸೆಲೆ: bing.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications