ಕನ್ನಡ ದೇಶದೊಳ್ ಕಿರುಗದ್ಯ

– ನಿತಿನ್ ಗೌಡ.

ಹಳಮೆಯ ಪುಟವನು ತಿರಿಗಿಸಿದೊಡನೆ, ಕನ್ನಡವ್ವನ ಒಡಲು ದೀರಾದಿ ದೀರ-ದೀರೆಯರನು ಹೆತ್ತಿರುವುದನ್ನು ಕಾಣಬಹುದು. ಈ ಕರಿಮಣ್ಣ ಕಟ್ಟಾಳುಗಳು ಜಗವೇ ನಿಬ್ಬೆರಗಾಗುವಂತಹ ಸಾಮ್ರಾಜ್ಯಗಳ ಕಟ್ಟಿ ಕನ್ನಡಿಗರ ‌ಎದೆಗಾರಿಕೆ, ಸಾಹಸ, ಔದಾರ‌್ಯ ಕಲೆ, ಶಿಲ್ಪಕಲೆ, ಜ್ನಾನ ಮತ್ತು ಸಾಹಿತ್ಯ ಪೋಶಣೆಯ ಹೆಜ್ಜೆ ಗುರುತುಗಳನ್ನು ಹಳಮೆಯ ಹಾದಿಯಲಿ ಮೂಡಿಸಿ ತೆರಳಿದ್ದಾರೆ. ಶಾತವಾಹನರು, ಕದಂಬ, ಗಂಗ, ಬಾದಾಮಿ ಚಾಳುಕ್ಯ, ರಾಶ್ಟ್ರಕೂಟ, ಬಾದಾಮಿ‌ ಚಾಳುಕ್ಯ, ಹೊಯ್ಸಳ, ಕರ‌್ಣಾಟಕ ಸಾಮ್ರಾಜ್ಯ(ವಿಜಯನಗರ ಸಾಮ್ರಾಜ್ಯ) – ಇವುಗಳು ಅರಿದಾದ ಕನ್ನಡದ ಕೊಂಡಿಗಳಾಗಿವೆ. ಇನ್ನು ಚುಟು, ನೊಳಂಬ, ಬಾಣ,ಪುನ್ನಾಟ, ಕಲಚೂರಿ, ಸೇವುಣರು/ಯಾದವರು, ಮೈಸೂರು ಒಡೆಯರು, ಕೆಳದಿಯ ನಾಯಕರು, ಚಿತ್ರದುರ್‍ಗದ ನಾಯಕರು, ಕಿತ್ತೂರು ಸೇರಿದಂತೆ ಹತ್ತಾರು ಕನ್ನಡದ ಕಿರು ಸಾಮ್ರಾಜ್ಯಗಳು, ಸಂಸ್ತಾನಗಳೂ ಕನ್ನಡದ ಹಳಮೆಯನ್ನು ಶ್ರೀಮಂತಗೊಳಿಸಿವೆ. ಇದಶ್ಟೆ ಅಲ್ಲದೆ, ಬಂಗಾಳದ ಸೇನರು,ಶಿಲಾಹಾರರು ಸೌರಾಶ್ಟ್ರದ ಸೋಲಂಕಿಗಳು, ಪಶ್ಚಿಮದ(ವೆಂಗಿ) ಚಾಳುಕ್ಯರು, ಗೋವೆಯ ಕದಂಬರು, ಕಳಿಂಗ ಕದಂಬರು, ಕಂಪಿಲೆಯ ರಾಜ್ಯ, ಪಶ್ಚಿಮದ ಗಂಗರು(ಒಡಿಶಾ), ಮಿತಿಲೆಯ ಕರ್‍ನಾಟರು ,ಲಾಟದ ಚಾಳುಕ್ಯರು, ನವಸಾರಿಕೆಯ ಚಾಳುಕ್ಯರು, ನೇಪಾಳದ ಮಲ್ಲ – ಕರ್‍ನಾಟ ಸೇರಿದಂತೆ ಇನ್ನೂ ಸಾಕಶ್ಟು ಸಾಮ್ರಾಜ್ಯಗಳಿವೆ. ಹೀಗೆ ಇವರೆಲ್ಲರ ಮೂಲವೂ ಕನ್ನಡದ ರಾಜಮನೆತನಗಳೇ ಆಗಿವೆ. ಇಂತಹ ಕೆಚ್ಚೆದೆಯ ಕನ್ನಡದ ಹಿರಿಯಾಳುಗಳು ಮತ್ತು ಸಾಮ್ರಾಜ್ಯಗಳ ಹಿರಿಮೆಯನ್ನು ಸಾರಿ ಹೇಳುವ ಒಂದು ಮೊಗಸಿದು. ಇದನ್ನು ಹಿರಿಹೊಗಳಿಕೆ(ಬಹುಪರಾಕ್) ಅತವಾ ಕಿರುಗದ್ಯ ಮಾದರಿಯಲ್ಲಿ ಕಾಣಬಹುದು.

ಇಮ್ಮಡಿ ಪುಲಕೇಶಿ

ಅರಿಗಳ ನೆತ್ತರವ ಬಸಿದು, ಕಟ್ಟಿದ ನಾಡದು
ಉತ್ತರದ ಸೊಕ್ಕಿಗರಿ , ನಮ್ ಎರೆಯ..
ಕಡು ಕಾಳಗದೊಳ್ ಎರೆಯನ ಕೆಣಕಿದವರಿಲ್ಲ
ಚಾಳುಕ್ಯ ಪರಮೇಶ್ವರ, ಅಜರಾಮರ
ಪಡುಕಡಲ ದಳಪತಿ, ದಕ್ಶಿಣ ಪತೇಶ್ವರ
ಕನ್ನಡದ ಕರಿಮಣ್ಣ ಬಸಿರಿವ..
ಕರ್‍ನಾಟ ಬಲಕೆ ಬಲವೊಳ್, ಇಮ್ಮಡಿ ಪುಲಕೇಶಿ

 

ಗಂಡುಗಲಿ ಕುಮಾರರಾಮ

ಅಡಿಯಿಂದರಸಿ‌ ಮುಡಿವರೆಗೂ ,
ಮುಟ್ಟಲಾಗದ ಗಂಡುಗಲಿ..
ನೂರೆಂಟು ಪಟ್ಟುಗಳ ಅದಿಪತಿ
ದಿಟಹಾದಿ ತುಳಿದ ಕಟ್ಟಾಳು..
ಜನಪದರ ಲಾವಣಿಗಳ ನೆಚ್ಚಿನ ದಳಪತಿ
ಕರುನಾಡ ಎದುರಾಳಿಗಳಿಗೆ ಅರಿ
ಹಿರಿಬಲದಾಳು ಗಂಡುಗಲಿ ಕುಮಾರರಾಮ..

 

ಅಮೋಗವರ್‍ಶ ನ್ರುಪತುಂಗ

ನೇಗಿಲ ಸದ್ದಲಿ ಪುಟ್ಟಿದ ಕೂಟ
ಕನ್ನಡದ ಹಳಮೆಯ ಒಡಲೊಳ ಮಹಾರಾಶ್ಟ್ರದೊಳು
ರಟ್ಟಕೂಟರ ಅಮೋಗ ಕೂಟದೊಡೆಯ;
ಕಲೆ,ವಾಸ್ತು ಶಿಲ್ಪ, ಸಾಹಿತ್ಯ ಪೋಶಕ
ಶಾಂತಿದೂತ, ಅಮೋಗವರ್‍ಶ ನ್ರುಪತುಂಗ ಕಲಿ

( ಚಿತ್ರಸೆಲೆ: ಬರಹಗಾರರು )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: