ಕವಿತೆ: ಪ್ರಣಯ

– ಕಿಶೋರ್ ಕುಮಾರ್.

ಒಲವು, love

ಪ್ರಣಯವಿದು ಹೊಸದು
ನಮ್ಮಬ್ಬಿರ ಹೊಸೆದಿದೆ
ಒಲವಿನ ಹಾಸಿಗೆ ಹಾಸಿ
ಕೈ ಬೀಸಿ ಕರೆದಿದೆ

ಮನವರಳಿ ನಲಿದು
ಹೊಸ ಹರುಶ ತಂದು
ದಿನದಿನಕೂ ತುಡಿತ ಹೆಚ್ಚಿದೆ
ನಾಳೆಯ ಕನಸುಗಳ ತಂದಿದೆ

ಬಿಗಿಯಾಗಲಿ ಈ ನಂಟು
ಒಡೆಯುವ ಮಾತೇ ಬರದಿರಲಿ
ಸೊಗಸಾಗಲಿ ಈ ಬದುಕು
ನಗುವಿನ ದಿನಗಳೇ ತುಂಬಿರಲಿ

ಒಬ್ಬರಿಗೊಬ್ಬರು ಜೊತೆಯಾಗುವ
ನೋವು ನಲಿವಿನಲಿ ಜೊತೆ ನಿಂತು
ಎಲ್ಲರ ನಂಬಿಕೆ ಗೆಲ್ಲುವ
ಅವರೆದುರು ಗೆದ್ದು ಬಾಳುವ

(ಚಿತ್ರಸೆಲೆ: pexels.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. K.V Shashidhara says:

    👌🏽👌🏽👌🏽

ಅನಿಸಿಕೆ ಬರೆಯಿರಿ:

Enable Notifications OK No thanks