ಮಾಡಿನೋಡಿ ರುಚಿ ರುಚಿಯಾದ ಮೆಂತೆಮುದ್ದೆ

ರೇಶ್ಮಾ ಸುದೀರ್.

 

ಮೆಂತೆ ಹಿಟ್ಟಿಗೆ ಬೇಕಾಗುವ ಸಾಮಾಗ್ರಿಗಳು:

ಅಕ್ಕಿ—— 1 ಕೆ.ಜಿ
ಗೋದಿ—- 1/2 ಕೆ.ಜಿ
ಮೆಂತೆ—- 250 ಗ್ರಾಮ್
ಉದ್ದಿನಬೇಳೆ- 250 ಗ್ರಾಮ್

ಒಂದು ಬಾಣಲೆಯಲ್ಲಿ ಅಕ್ಕಿಯನ್ನು ಸ್ವಲ್ಪ ಬಾಡಿಸಿಕೊಳ್ಳಿ. ಗೋದಿ, ಮೆಂತೆ ಹಾಗು ಉದ್ದಿನಬೇಳೆಯನ್ನು ಬೇರೆ ಬೇರೆಯಾಗಿ ಸ್ವಲ್ಪ ಕೆಂಪಗೆ ಹುರಿದುಕೊಂಡು ಆರಿದ ಮೇಲೆ, ಬಾಡಿಸಿಕೊಂಡ ಅಕ್ಕಿಯ ಜೊತೆ ಸೇರಿಸಿ ಗಿರಣಿಯಲ್ಲಿ ನುಣ್ಣಗೆ ಪುಡಿಮಾಡಿಸಿ ಇಟ್ಟುಕೊಳ್ಳಿ. ಬೇಕಾದಾಗ ಕೆಳಗೆ ತಿಳಿಸಿದ ಮಾದರಿಯಲ್ಲಿ ಉಂಡೆ ಮಾಡಿ ಸೇವಿಸಿ.

ಮೆಂತೆಮುದ್ದೆ ಮಾಡುವ ಬಗೆ:

ಗಿರಣಿ ಮಾಡಿಸಿಕೊಂಡ ಮೆಂತೆಪುಡಿ — 1 ಲೋಟ
ನೀರು—— 1 3/4 ಲೋಟ
ಬೆಲ್ಲ——- 1 ಅಚ್ಚು(ದೊಡ್ದ)
ತುಪ್ಪ- ಸ್ವಲ್ಪ
ಉಪ್ಪು—ಚಿಟಿಕೆ

ದಪ್ಪತಳದ ಪಾತ್ರೆಯಲ್ಲಿ ನೀರು ಹಾಕಿ ಅದಕ್ಕೆ ಬೆಲ್ಲ ಹಾಕಿ ಕುದಿಯಲು ಇಡಿ. ಬೆಲ್ಲ ಕರಗಿದ ನಂತರ ಸೋಸಿ ಕೊಂಡು ಮತ್ತೆ ಬೆಲ್ಲದ ನೀರನ್ನು ಕುದಿಯಲು ಇಡಿ. ಅದಕ್ಕೆ 2 ಚಮಚ ತುಪ್ಪಹಾಕಿ, ಚಿಟಿಕೆ ಉಪ್ಪುಹಾಕಿ, ಮೆಂತೆ ಪುಡಿಯನ್ನು ಉದುರಿಸಿ ಚೆನ್ನಾಗಿ ಗಂಟಿಲ್ಲದಂತೆ ತಿರುಗಿಸಿ. ರಾಗಿ ಮುದ್ದೆಯಂತೆ ಮುದ್ದೆ ಮಾಡಿ ನಡುವಿಗೆ ಒಂದು ಗುಂಡಿ ಮಾಡಿ, ತುಪ್ಪಹಾಕಿ(ಚಿತ್ರದಲ್ಲಿ ತೋರಿಸಿದಂತೆ) ಬಿಸಿಬಿಸಿಯಾಗಿ ಸವಿಯಿರಿ. ಇದು ಬಾಣಂತಿಯರಿಗೂ ಒಳ್ಳೆಯದು.

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. My favorite breakfast. 🙂

indrajithbhadravathi ಗೆ ಅನಿಸಿಕೆ ನೀಡಿ Cancel reply

%d bloggers like this: