ಮಾಡಿನೋಡಿ ಸೀಗಡಿ ಬಿರಿಯಾನಿ

– ನಮ್ರತ ಗೌಡ.

20160501_214946

ಬೇಕಾಗುವ ಸಾಮಾನುಗಳು:

ಶುಂಟಿ – 1 ಇಂಚು
ಬೆಳ್ಳುಳ್ಳಿ – 1 ನಡು ಗಾತ್ರದ್ದು
ಹಸಿ ಮೆಣಸು – 4
ಈರುಳ್ಳಿ – 1 ದೊಡ್ಡ ಗಾತ್ರದ್ದು
ಚಕ್ಕೆ-ಲವಂಗ – ಸ್ವಲ್ಪ
ಪುದಿನ – ಸ್ವಲ್ಪ
ಕೊತ್ತಂಬರಿ – ಸ್ವಲ್ಪ
ಟೊಮೆಟೋ – 1 ದೊಡ್ಡದು
ನಿಂಬೆಹುಳಿ – 1
ಪಲಾವು ಸೊಪ್ಪು – ಒಂದು ಗರಿ
ಸೀಗಡಿ – 300 ಗ್ರಾಂ.
ಕಾರದ ಪುಡಿ -2 ಚಮಚ
ಅಕ್ಕಿ – 1 ಲೋಟ (ಇದನ್ನು ಮೊದಲೇ ಅನ್ನ ಮಾಡಿಟ್ಟುಕೊಂಡಿರಿ)

ಮಾಡುವ ಬಗೆ:

ಮೊದಲು ಸೀಗಡಿಯನ್ನು ಕವಚ ಬಿಡಿಸಿ ಶುಚಿಮಾಡಿಕೊಳ್ಳಿ. ದಪ್ಪ ತಳದ ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ, ಕಾದ ನಂತರ ಅರ‍್ದ ಹೆಚ್ಚಿದ ಈರುಳ್ಳಿ ಹಾಕಿ ಬಾಡಿದ ನಂತರ ಅದಕ್ಕೆ ತೊಳೆದ ಸೀಗಡಿ, ಅರಸಿನ, ಉಪ್ಪು ಹಾಕಿ ಬೇಯಿಸಿ(ಸೀಗಡಿ ಬೇಗನೆ ಬೇಯುತ್ತದೆ), ಅದಕ್ಕೆ ನಿಂಬೆ ರಸ, ಕಾರದ ಪುಡಿ ಹಾಕಿ ಹುರಿದು ಇದನ್ನು ಎತ್ತಿಟ್ಟುಕೊಳ್ಳಿ.

ಮಸಾಲೆ ಮಾಡುವ ಬಗೆ:
ಚಕ್ಕೆ – ಲವಂಗ, ಹಸಿಮೆಣಸು, ಈರುಳ್ಳಿಯನ್ನು ಕಾದ ಎಣ್ಣೆಯಲ್ಲಿ ಸ್ವಲ್ಪ ಬಾಡಿಸಿಕೊಳ್ಳಿ, ಈ ಮಿಶ್ರಣಕ್ಕೆ ಶುಂಟಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಪುದಿನ ಸೊಪ್ಪುನ್ನು ಹಾಕಿ ಮಿಕ್ಸಿಯಲ್ಲಿ ಸ್ವಲ್ಪವೇ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಸ್ವಲ್ಪ ಈರುಳ್ಳಿ, ಟೊಮೆಟೋ, ಪಲಾವು ಸೊಪ್ಪು, ಸ್ವಲ್ಪ ಉಪ್ಪು ಹಾಕಿ ಟೊಮೆಟೋ ಕರಗುವವರೆಗೂ ಬಾಡಿಸಿ, ಮಿಕ್ಸಿಯಲ್ಲಿ ರುಬ್ಬಿದ ಮಸಾಲೆಯನ್ನು ಇದಕ್ಕೆ ಸೇರಿಸಿ ಬಾಡಿಸಿದ ನಂತರ ಬೇಯಿಸಿಟ್ಟುಕೊಂಡ ಸೀಗಡಿಯನ್ನು ಇದಕ್ಕೆ ಹಾಕಿರಿ.

ಒಂದು ದಪ್ಪ ತಳದ ಪಾತ್ರೆಗೆ ಒಂದು ಪದರ ಮಸಾಲೆ ಹಾಕಿ ಅದರ ಮೇಲೆ ಅನ್ನವನ್ನು ಹಾಕಿ, ಇದೇ ತರ ಎರಡು ಮೂರು ಪದರ ಹಾಕಿ. ಇದನ್ನು ಮುಚ್ಚಿ ಸಣ್ಣನೆಯ ಉರಿಯಲ್ಲಿ ಐದು ನಿಮಿಶ ಬೇಯಿಸಿ. ಬಿಸಿ ಬಿಸಿ ಇರುವಾಗಲೇ ಬಡಿಸಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: