ಸಾಬುದಾನಿ(ಸಬ್ಬಕ್ಕಿ) ವಡೆ

– ಮಾನಸ ಎ.ಪಿ.

ಸಾಬುದಾನಿ ವಡೆ, ಸಬ್ಬಕ್ಕಿ ವಡೆ, Sabudani Vade, Sabbakki vade

ಏನೇನು ಬೇಕು?

  • ಸಾಬೂದಾನಿ(ಸಬ್ಬಕ್ಕಿ) – 1/2 ಕೆಜಿ
  • ಬಟಾಟಿ(ಆಲೂಗಡ್ಡೆ)- 2
  • ಹಸಿ ಮೆಣಸಿನಕಾಯಿ ಚಟ್ನಿ – 2-3 ಚಮಚ
  • ಜೀರಿಗೆ – 1/2 ಚಮಚ
  • ಹುರಿದ ಶೇಂಗಾ ಪುಡಿ – ಒಂದು ಹಿಡಿ
  • ಉಪ್ಪು – ರುಚಿಗೆ ತಕ್ಕಶ್ಟು
  • ಸಕ್ಕರೆ – ರುಚಿಗೆ ತಕ್ಕಶ್ಟು

ಮಾಡುವ ಬಗೆ

  • ಸಾಬುದಾನಿ ಒಂದು ಪಾತ್ರೆಯಲ್ಲಿ ತೆಗೆದುಕೊಂಡು ನೀರು ಹಾಕಿ ತೊಳೆಯಿರಿ
  • ನಂತರ ನೀರು ಬಸಿದು 4 ತಾಸು ನೆನಸಿಡಬೇಕು
  • ನೆನೆದ ಸಾಬೂದಾನಿಗೆ ಆಲೂಗಡ್ಡೆ ತುರಿದು ಹಾಕಿ. ಜೊತೆಗೆ ಜೀರಿಗೆ, ಶೇಂಗಾ ಪುಡಿ, ಹಸಿಮೆಣಸಿನಕಾಯಿಯ ಚಟ್ನಿ, ಉಪ್ಪು,ಸಕ್ಕರೆ – ಎಲ್ಲವನ್ನು ಸೇರಿಸಿ ಕಲಿಸಿ 10 ನಿಮಿಶ ಬಿಡಿ
  • ನಂತರ ಕಾಯ್ದ ಎಣ್ಣೆಯಲ್ಲಿ ನಿಮಗೆ ಬೇಕಾದ ಆಕಾರದಲ್ಲಿ ಗರಿ ಗರಿಯಾಗಿ ಹೊಂಬಣ್ಣ ಬರುವವರೆಗೂ ಕರಿಯಿರಿ

ರುಚಿಯಾದ, ಸವಿಯಾದ ಸಾಬುದಾನಿ ವಡೆ ಈಗ ತಯಾರು. ಕೊಬ್ಬರಿ ಚಟ್ನಿಯೊಂದಿಗೆ ತಿನ್ನಲು ಚೆನ್ನಾಗಿರುತ್ತದೆ.

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: