ಈರುಳ್ಳಿ ಬಜ್ಜಿ

– ನಿತಿನ್ ಗೌಡ.

ಏನೇನು ಬೆಕು ?

  • ಈರುಳ್ಳಿ – 2 ರಿಂದ 3
  • ಕಡಲೆ ಹಿಟ್ಟು – ಒಂದು ಕಪ್ಪು
  • ಜೀರಿಗೆ – 1 ಚಮಚ
  • ಕೊತ್ತಂಬರಿ ಬೀಜ (ಬೇಕಾದ್ದಲ್ಲಿ) – 1 ಚಮಚ
  • ಉಪ್ಪು ಸ್ವಲ್ಪ
  • ಹಸಿಮೆಣಸಿನ ಕಾಯಿ (ಬೇಕಾದ್ದಲ್ಲಿ) – 1
  • ಇಂಗು (ಬೇಕಾದಲ್ಲಿ) ಸ್ವಲ್ಪ
  • ಅಕ್ಕಿ ಹಿಟ್ಟು – 2 ಚಮಚ
  • ಕಾರದ ಪುಡಿ – ಅರ‍್ದ ಚಮಚ
  • ಕರಿಬೇವು ಸ್ವಲ್ಪ

ಮಾಡುವ ಬಗೆ ಹೇಗೆ ?

ಮೊದಲಿಗೆ ಈರುಳ್ಳಿಗಳನ್ನು ತೆಳ್ಳಗೆ ಹೆಚ್ಚಿಕೊಳ್ಳಬೇಕು. ಇದಕ್ಕೆ ಜೀರಿಗೆ, ಕೊತ್ತಂಬರಿ ಬೀಜವನ್ನು ಕುಟ್ಟಿಕೊಂಡು ಹಾಕಿಕೊಳ್ಳಿರಿ. ಆಮೇಲೆ ಬೇಕಾದಲ್ಲಿ ಒಂದು ಹಸಿಮೆಣಸಿನ ಕಾಯಿ, ಇಂಗು, ಸ್ವಲ್ಪ ಬಿಸಿ ಎಣ್ಣೆ, ಉಪ್ಪು ಹಾಕಿ ಮೆಲ್ಲಗೆ ಕಲಸಿಕೊಳ್ಳಿರಿ (ಕಿವುಚುವುದು ಬೇಡ). ಈರುಳ್ಳಿ ನೀರು ಬಿಡುತಿದ್ದಂತೆ ಕಾರದಪುಡಿ, ಕರಿಬೇವು ,ಅಕ್ಕಿ ಹಿಟ್ಟು ಮತ್ತು ಕಡಲೆ ಹಿಟ್ಟನ್ನು ಕೊಂಚ ಕೊಂಚವೆ ಹಾಕಿ ಕಲಸಿಕೊಳ್ಳಿರಿ. ಯಾವಾಗಲೂ ಕಡಲೆಹಿಟ್ಟು ಕಮ್ಮಿ ಇರಬೇಕು ಮತ್ತು ಈರುಳ್ಳಿ ಹೆಚ್ಚಿರಬೇಕು. ಇದನ್ನು ಮಾಡುತ್ತಿರುವ ಹೊತ್ತಿನಲ್ಲೇ ಬಾಣಲೆಗೆ ಎಣ್ಣೆ ಕಾಯಲು ಇಟ್ಟುಕೊಂಡಿರಬೇಕು. ಈಗ ಕಾದ ಎಣ್ಣೆಯಲ್ಲಿ ಹಿಟ್ಟನ್ನು ಚಪ್ಪಟೆ ಚಪ್ಪಟೆ ಮಾಡಿ ಕರಿಯಲು ಬಿಡಬೇಕು. ಇದು ಗರಿ ಗರಿ ಬೆಂದಮೇಲೆ ತೆಗೆಯಬೇಕು. ಈರುಳ್ಳಿ ಬಜ್ಜಿ ಸಂಜೆ ಹೊತ್ತಿಗೆ ಕಾಪಿ, ಟೀ ಜೊತೆ ಕುರುಕಲು ತಿಂಡಿಯಾಗಿ ತಿನ್ನಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: