ಕವಿತೆ: ಕಲ್ಪವ್ರುಕ್ಶ

– ಶ್ಯಾಮಲಶ್ರೀ.ಕೆ.ಎಸ್.

ಬುವಿಯೊಳಗೆ ಬೇರು ಕಟ್ಟಿ
ಮುಗಿಲಿನತ್ತ ಗರಿಯ ಬಿಚ್ಚಿ
ನಿಂದ ಜೀವವ್ರುಕ್ಶವೇ

ಪಸುರು ನಾರು
ಎಳೆ ಗಂಜಿ ನೀರು
ಹೊತ್ತ ಜೀವವಾಹಿನಿಯೇ

ಕಾಯಿ ಗೊಂಚಲುಗಳ
ಒರಟು ಗಟ್ಟಿ ಕಾಂಡವ
ಬಿಗಿಹಿಡಿದು ಬೆರಗಾಗಿಸಿರುವೆ

ತಂಪು ಗಾಳಿ ಬೀಸಿ
ನೇಸರನಿಗೆ ನಗೆಯ ಬೀರಿ
ಬದಿಯಲಿ ನಿಂತ ಹೆಮ್ಮರವೇ

ಹಸಿರು ಚಪ್ಪರವಾಗಿ
ಬಡವನ ಸೂರಿಗೆ ನೆರಳಾಗಿ
ಕಾಯುವ ಸುರವ್ರುಕ್ಶವೇ
ಕರೆದೇವು ನಿನ್ನ ಕಲ್ಪವ್ರುಕ್ಶ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: