ಮೊಟ್ಟೆ ಬಿರಿಯಾನಿ

– ಕಿಶೋರ್ ಕುಮಾರ್.

ಏನೇನು ಬೇಕು

  • ಈರುಳ್ಳಿ – 3
  • ಟೊಮೆಟೋ – 3
  • ಹಸಿ ಮೆಣಸಿನಕಾಯಿ – 5
  • ಪುದೀನ – ಸ್ವಲ್ಪ
  • ಮೊಟ್ಟೆ – 4
  • ಕೊತ್ತಂಬರಿ ಸೊಪ್ಪು – ಸ್ವಲ್ಪ
  • ಮೆಂತ್ಯ ಸೊಪ್ಪು – ಸ್ವಲ್ಪ
  • ಪಲಾವ್ ಎಲೆ – 2
  • ಏಲಕ್ಕಿ – 2
  • ಚಕ್ಕೆ – ಸಣ್ಣ ಚೂರು
  • ಲವಂಗ – 2
  • ಅಡುಗೆ ಎಣ್ಣೆ – ಸ್ವಲ್ಪ
  • ಅಕ್ಕಿ – 1 ಲೋಟ
  • ಅರಿಶಿಣದ ಪುಡಿ – ½ ಚಮಚ
  • ಶುಂಟಿ ಮತ್ತು ಬೆಳ್ಳುಳ್ಳಿ ಪೇಸ್ಟ್ – 2 ಚಮಚ
  • ಕೊತ್ತಂಬರಿ ಬೀಜದ ಪುಡಿ (ದನಿಯಾ ಪುಡಿ) – ಸ್ವಲ್ಪ
  • ಗರಂ ಮಸಾಲೆ – ಸ್ವಲ್ಪ

ಮಾಡುವ ಬಗೆ

ಮೊಟ್ಟೆಯನ್ನು ಬೇಯಿಸಿ, ಸಿಪ್ಪೆ ತೆಗೆಯಿರಿ. ಬೇಯಿಸಿದ ಮೊಟ್ಟೆಯನ್ನು ಚಿಕ್ಕ ಚೂರುಗಳಾಗಿ ಕತ್ತರಿಸಿ, ಒಳಗಿನ ಹಳದಿ ಬಾಗವನ್ನು ತೆಗೆದು, ಬಿಳಿ ಬಾಗವನ್ನು ಮಾತ್ರ ಉಳಿಸಿಕೊಳ್ಳಿ.

5 ಹಸಿ ಮೆಣಸಿನಕಾಯಿ, ಬಿಡಿಸಿಟ್ಟುಕೊಂಡಿದ್ದ ಪುದೀನ, ಕೊತ್ತಂಬರಿ ಸೊಪ್ಪು ಹಾಗು ಮೆಂತ್ಯ ಸೊಪ್ಪು ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ (ನೀರು ಸೇರಿಸಬಾರದು) ತೆಗೆದಿಡಿ. ಇನ್ನೊಂದು ಜಾರ್ ಗೆ 3 ಟೊಮೆಟೋ ಹಾಕಿ ರುಬ್ಬಿ ಪೇಸ್ಟ್ ಮಾಡಿಕೊಳ್ಳಿ.

ಒಂದು ಕುಕ್ಕರ್ ಗೆ 5 ಚಮಚ ಅಡುಗೆ ಎಣ್ಣೆ ಹಾಕಿ. ಎಣ್ಣೆ ಕಾದ ಮೇಲೆ ಏಲಕ್ಕಿ, ಪಲಾವ್ ಎಲೆ ಹಾಗೂ ಲವಂಗ ಮತ್ತು ಕತ್ತರಿಸಿಟ್ಟುಕೊಂಡಿದ್ದ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ಇದಕ್ಕೆ ½ ಚಮಚ ಅರಿಶಿಣದ ಪುಡಿ ಸೇರಿಸಿ. ಈಗ 2 ಚಮಚ ಶುಂಟಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಗೂ ಟೊಮೆಟೋ ಪೇಸ್ಟ್ ಸೇರಿಸಿ. ಸ್ವಲ್ಪ ಹೊತ್ತು ಬಿಟ್ಟು ರುಬ್ಬಿಟ್ಟಿದ್ದ ಹಸಿ ಮೆಣಸಿನಕಾಯಿ, ಪುದೀನ, ಕೊತ್ತಂಬರಿ ಸೊಪ್ಪು ಮತ್ತು ಮೆಂತ್ಯ ಸೊಪ್ಪಿನ ಮಿಶ್ರಣವನ್ನು ಸೇರಿಸಿ 2 ನಿಮಿಶ ಹುರಿಯಿರಿ. ಇದಕ್ಕೆ ಕೊತ್ತಂಬರಿ ಬೀಜದ ಪುಡಿ ಹಾಗೂ ಗರಂ ಮಸಾಲೆ ಸೇರಿಸಿ. ಕಾರ ಹೆಚ್ಚು ಬೇಕಿದ್ದರೆ ಕೆಂಪು ಕಾರದ ಪುಡಿ (ರೆಡ್ ಚಿಲ್ಲಿ ಪೌಡರ್) ಸೇರಿಸಬಹುದು.

ಈಗ ಕತ್ತರಿಸಿಟ್ಟುಕೊಂಡಿದ್ದ ಮೊಟ್ಟೆಯ ಬಿಳಿ ಬಾಗವನ್ನು ಸೇರಿಸಿ 3 ನಿಮಿಶ ಹುರಿಯಿರಿ. ಇದಕ್ಕೆ ನೆನೆಸಿಟ್ಟ ಅಕ್ಕಿಯನ್ನು ಸೇರಿಸಿ ಅದಕ್ಕೆ ತಕ್ಕಂತೆ ನೀರು ಸೇರಿಸಿ ಕುಕ್ಕರ್ ಮುಚ್ಚಿ 2 ಕೂಗು (ವಿಶಲ್) ಕೂಗಿಸಿ. ಈಗ ಮೊಟ್ಟೆ ಬಿರಿಯಾನಿ ಸವಿಯಲು ರೆಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: