ಕವಿತೆ: ಏನು ಪಲ
– ಮಹೇಶ ಸಿ. ಸಿ.
ನೂರು ಮಡಿಯ ಮಾಡಿದರೇನು ಪಲ?
ತನುಶುದ್ದಿ ಇಲ್ಲದ ಮೇಲೆ
ದೇವನೆಶ್ಟು ಬೇಡಿದರೇನು ಪಲ?
ಮನಶುದ್ದಿ ಇಲ್ಲದ ಮೇಲೆ
ನೂರಾರು ಬಂದುಗಳು ಇದ್ದರೇನು ಪಲ?
ತಾಯ ಒದ್ದು ಹೋದಮೇಲೆ
ಬೆಟ್ಟದಶ್ಟು ಸಿರಿವಂತಿಕೆ ಇದ್ದರೇನು ಪಲ?
ತಂದೆಯ ಮಮತೆ ಸತ್ತ ಮೇಲೆ
ಬಗೆ ಬಗೆಯ ಹೂವು ಇಟ್ಟರೇನು ಪಲ?
ಅಂತರಂಗದಲ್ಲಿ ಬಕ್ತಿ ಇಲ್ಲದ ಮೇಲೆ
ಗುಡಿಯೊಳಗೆ ದೀಪವ ಬೆಳಗಿದರೇನು ಪಲ?
ಮನವು ಅಂದಕಾರದಲ್ಲಿದ್ದ ಮೇಲೆ
ಜಗಮೆಚ್ಚುವ ಕಾಳಜಿ ಇದ್ದರೇನು ಪಲ?
ಪ್ರೀತಿ ಇಲ್ಲದ ಮೇಲೆ
ನೋಡುವಂತೆ ಸಹಾಯ ಮಾಡಿದರೇನು ಪಲ?
ಒಳ್ಳೆಯ ಬಾವನೆ ಇಲ್ಲದ ಮೇಲೆ
ಸುಳ್ಳಿನ ಹೊದಿಕೆ ಹೊದ್ದರೇನು ಪಲ?
ಸತ್ಯವೇ ಸತ್ತು ಬಿದ್ದಮೇಲೆ
ಎಶ್ಟೇ ಸಂತೈಸಿದರೇನು ಪಲ?
ನಂಬಿಕೆಗೆ ಕೊಳ್ಳಿ ಬಿದ್ದಮೇಲೆ
(ಚಿತ್ರ ಸೆಲೆ: pixabay.com)
ಇತ್ತೀಚಿನ ಅನಿಸಿಕೆಗಳು