ನಿನ್ನ ನಗುವಿನ ಸಿಂಗಾರ

– ಸುಹಾಸ್ ಮೌದ್ಗಲ್ಯ.

ನಗು, ಗೆಳತಿ, ಅವಳ ನಗು, smile, love

ನೀ ಸನಿಹ ಇರೆ ಏನೋ ಸಡಗರ
ನಿನ್ನ ನಗುವು ಮನಸ್ಸಿಗೆ ಸುಕಕರ
ನಗುವ ದನಿಯ ಕೇಳಲು ಹಿತಕರ
ನಗುತಲಿರು ಇರದೆ ಯಾವ ಮುಜುಗರ

ಕೊಡಬೇಕಿಲ್ಲ ನನಗೆ ಯಾವುದೇ ಪಗಾರ
ಮಾಡುವೆ ನಿನ್ನ ನಗುವಿನ ಪ್ರಚಾರ
ಕಡೆಯಲ್ಲಿ ತೋರು ನನಗೆ ಸ್ವಲ್ಪ ಕನಿಕರ
ನಿನ್ನ ನಗುವ ಕೊಟ್ಟು ಮಾಡು ಉಪಚಾರ

ರಚಿಸಿರುವೆ ಮನದೊಳಗೊಂದು ಸರ‍್ಕಾರ
ಅದರಲ್ಲಿ ನಿನ್ನದೇ ಎಂದಿಗೂ ಪರಮಾದಿಕಾರ
ಇರಲಿ ನನ್ನ ಮೇಲೆ ಸ್ವಲ್ಪ ಮಮಕಾರ
ಎಶ್ಟಾದರೂ ನಾನು ಸಾಮಾನ್ಯ ಮತದಾರ

ಮೈಯ ಮೇಲಿನ ಚೂರು ಬಂಗಾರ
ಜಡೆಗೆ ಮುಡಿದ ಕೆಂಪು ಮಂದಾರ
ಹಣೆಯ ಮೇಲಿನ ಪುಟ್ಟ ಸಿಂದೂರ
ಎಲ್ಲದರ ಪ್ರತೀಕ ನಿನ್ನ ನಗುವಿನ ಸಿಂಗಾರ

( ಚಿತ್ರ ಸೆಲೆ:  youtube )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: