ಚುಟುಕುಗಳು

– ಕಿಶೋರ್ ಕುಮಾರ್.

***ಹೂವು***

ಮಂದಹಾಸದ ಮಾದರಿಯೇ ಹೂವು
ಮನತಣಿಸೋ ಮುಗ್ದತೆಯೇ ಹೂವು
ಮಕರಂದದ ಮನೆಯಿದು ಹೂವು
ಮುಡಿಗೇರೋ ಮಲ್ಲಿಗೆ ಈ ಹೂವು

***ಮಂಜು***

ಮುಂಜಾನೆಯಲಿ ಮೊದಲಾಗೋ ಮಂಜು
ಚಳಿಗಾಲದ ಚಾಯೆ ಈ ಮಂಜು
ಬೆಳಕನು ಮರೆಮಾಚುವ ಮಂಜು
ಮುದ ನೀಡುವ ಮಾಯಾವಿ ಈ ಮಂಜು

***ಹೊಗಳಿಕೆ***

ನಿನ್ನ ಹಿಗ್ಗಿಸಬಹುದು ಈ ಹೊಗಳಿಕೆ
ಹಿಗ್ಗಿ ನಿನತನವ ಬಿಡಿಸುವ ಈ ಹೊಗಳಿಕೆ
ಎಂದಿಗೂ ದಾಸನಾಗಿಸೋ ಈ ಹೊಗಳಿಕೆ
ಕುಗ್ಗಿದಾಗ ಮರೆಯಾಗುವುದು ಈ ಹೊಗಳಿಕೆ

***ನಿನ್ನತನ***

ಬಿಡಬೇಡ ಎಂದಿಗೂ ನಿನ್ನತನ
ನಿನ್ನತನವೆ ನಿನ್ನ ಗುರುತು
ಎಂದಿಗೂ ಇರಬೇಡ ಇದ ಮರೆತು
ದುಡ್ಡಲ್ಲ ಅದು ಮತ್ತೆ ಸಂಪಾದಿಸಲು, ಅದು ನಿನ್ನತನ

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: