ಕವಿತೆ: ಕೆಲವರು ಹೀಗೆಯಲ್ಲವೇ

– .

ಕೆಲವರು ಹೀಗೆಯಲ್ಲವೇ
ತಾವು ಕೂಡ ಮುಂದೆ ಬಂದು
ಕೆಲಸಗಳನ್ನು ಸಹ ಮಾಡುವುದಿಲ್ಲ
ಮತ್ತೊಬ್ಬರು ಕೆಲಸ ಮಾಡಲೂ
ಮುಂದೆ ಬಂದರು ಸಹಿಸುವುದಿಲ್ಲ

ಕೆಲವರು ಹೀಗೆಯಲ್ಲವೇ
ತಾವು ಕೂಡ ಮುಂದೆ ಬಂದು
ಏನನ್ನು ಸಹ ಕಲಿಯುವುದಿಲ್ಲ
ಮತ್ತೊಬ್ಬರು ಕಲಿಕೆ ಕಲಿಯಲು
ಮುಂದೆ ಬಂದರು ಸಹಿಸುವುದಿಲ್ಲ

ಕೆಲವರು ಹೀಗೆಯಲ್ಲವೇ
ತಾವು ಕೂಡ ಮುಂದೆ ಬಂದು
ಏನನ್ನು ಸಹ ಹೇಳಿ ಕೊಡುವುದಿಲ್ಲ
ಮತ್ತೊಬ್ಬರು ಹೇಳಿ ಕೊಡಲು
ಮುಂದೆ ಬಂದರು ಸಹಿಸುವುದಿಲ್ಲ.

ಕೆಲವರು ಹೀಗೆಯಲ್ಲವೇ
ತಾವು ಕೂಡ ಮುಂದೆ ಬಂದು
ಯಾವುದೇ ಹೊಸತನ ತರುವುದಿಲ್ಲ
ಮತ್ತೊಬ್ಬರು ಹೊಸತನ ತರಲು
ಮುಂದೆ ಬಂದರು ಸಹಿಸುವುದಿಲ್ಲ

ಕೆಲವರು ಹೀಗೆಯಲ್ಲವೇ
ತಾವು ಕೂಡ ಮುಂದೆ ಬಂದು
ಏನನ್ನು ಸಹ ಮೆಚ್ಚುವುದಿಲ್ಲ
ಮತ್ತೊಬ್ಬರು ಮೆಚ್ಚಿ ಹಾರೈಸಲು
ಮುಂದೆ ಬಂದರು ಸಹಿಸುವುದಿಲ್ಲ

ಕೆಲವರು ಹೀಗೆಯಲ್ಲವೇ
ತಾವು ಕೂಡ ಮುಂದೆ ಬಂದು
ಏನನ್ನು ಸಹ ಜವಾಬ್ದಾರಿ ಹೊರಲ್ಲ
ಮತ್ತೊಬ್ಬರು ಜವಾಬ್ದಾರಿ ಹೊರಲು
ಮುಂದೆ ಬಂದರು ಸಹಿಸುವುದಿಲ್ಲ

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: