ಹನಿಗವನಗಳು

– ವೆಂಕಟೇಶ ಚಾಗಿ.

*** ಒಳಿತು ***

ಕಡಲು ಉಪ್ಪಾದರೇನು ಆವಿ ಮಾತ್ರ ಸಿಹಿ
ಕೊಳವು ಕೆಸರಾದರೇನು ಕಮಲ ಸುಂದರ
ಇರುತನಕ ಕೊಡುವುದಾದರೆ ಕೊಟ್ಟು ಬಿಡು
ಜಗದ ಬದುಕಿಗೆ ಒಳಿತು ಮುದ್ದು ಮನಸೆ

*** ಎತ್ತ ಪಯಣ ***

ಅರೆ ನಿಮಿಶದ ಕುಶಿಗೆ ವರುಶದ ಶ್ರಮ
ಹಗಲಿರುಳಿನ ಗಳಿಕೆ ಸಾದನೆಯ ಬ್ರಮೆ
ಜ್ನಾನದೊಳಗೊಂದಿಶ್ಟು ನಿಜ ಅಜ್ನಾನ
ಎತ್ತ ಪಯಣವು ನಿನದು ಮುದ್ದು ಮನಸೆ

*** ಉಳಿತಾಯ ***

ಅನ್ನದಗುಳಿನ ಮಹಿಮೆ ಅರಿತವನೇ ಬಲ್ಲ
ಒಂದಗುಳಿನಲಿ ಹಸಿವ ನೀಗಿದನಾ ಗೊಲ್ಲ
ಉದರ ತ್ರುಪ್ತಿಗೆ ನಡೆಯುತಲೇ ಇವೆ ಸಮರ
ಉಳಿಸು ನಾಳೆಗೊಂದಿಶ್ಟು ಮುದ್ದು ಮನಸೆ

*** ಗೆಲುವು ***

ದಿನವಿಡೀ ತಿರುಗಿದರೂ ಬುವಿಗಿಲ್ಲ ತ್ರುಪ್ತಿ
ಕಾಯಕದ ಹಾದಿಯಲಿ ಹಗಲಿರುಳು ಪ್ರಾಪ್ತಿ
ಲಾಬವೋ ನಶ್ಟವೋ ಕೊನೆಗೊಂದು ಶೂನ್ಯ
ಗೆದ್ದವನೆ ಈ ಜಗದಿ ಮಾನ್ಯ ಮುದ್ದು ಮನಸೆ

(ಚಿತ್ರ ಸೆಲೆ: ecosalon.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications