ಕವಿತೆ: ಮೋಡಿ ಮಾಡಿಹಳು

– ಕಿಶೋರ್ ಕುಮಾರ್.

ಮುಡಿಗೇರಿದ ಆ ಮಲ್ಲಿಗೆ
ನಗು ಚೆಲ್ಲಿದೆ ಮೆಲ್ಲಗೆ
ನಗು ನಗುತಲೆ ಬರುವೆಯ
ಗೆಜ್ಜೆ ಸದ್ದ ಮಾಡುತ ನನ್ನಲ್ಲಿಗೆ

ರೆಪ್ಪೆಗಳಿವು ಬಡಿಯದೆ ನಿಂತಿವೆ
ನಿನ ಆ ಚೆಲುವ ಸವಿಯುತ
ಅದೇನು ಚೆಲುವು ನಿನ್ನದು
ಹೆಚ್ಚುತ್ತಿದೆ ನನ್ನ ಎದೆಬಡಿತ

ಏನನ್ನೂ ಲೆಕ್ಕಿಸದೆ ಬದುಕುತಿದ್ದ
ನನ್ನ ಬದುಕಿಗೆ ಲಗ್ಗೆ ಇಟ್ಟಿರುವೆ
ಲಗಾಮು ಇಲ್ಲದ ಈ ಕುದುರೆಯ
ಮನಸನು ಕಟ್ಟಿ ಹಾಕಿರುವೆ

ಆ ಕಂಗಳ ಕುಡಿ ನೋಟದಿ
ಮೋಡಿ ಮಾಡಿಹೆ ನೀನು
ನಾ ಬೇಕಂತಲೇ ಅದರಿಂದ
ಹೊರಬಾರದೆ ನಿಂತಿಹೆನು.

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks