ಓ ಕರುನಾಡ ತಾಯಿ

 ನಾಗರಾಜ್ ಬದ್ರಾ.

karunadatayi

ಓ ಕರುನಾಡ ತಾಯಿ, ನೀ ಕುಗ್ಗದಿರು ಎಂದಿಗೂ
ನಿನ್ನಯ ರಕ್ಶಣೆಗಾಗಿ
ಕರುನಾಡಿನ ಪ್ರತಿ ಮಗುವು
ಎಂದೆಂದಿಗೂ ಸಿದ್ದ

ಕರುನಾಡಿನ ಜೀವಾಳವಾದ ಜಲದಾರೆಗಳ
ಶ್ರೀಗಂದದ, ಚಿನ್ನದ ತವರಾದ ಕನ್ನಡ ನೆಲದ
ರಕ್ಶಣೆಗೆಗಾಗಿ ನಾವುಗಳು ಒಗ್ಗಟ್ಟಾಗಿ ಹೋರಾಡುವೆವು

ಉತ್ತರ, ದಕ್ಶಿಣ ಕರುನಾಡು ಎಂಬುದನ್ನು ಅಳಿಸಿ
ಅಕಂಡ ಕರುನಾಡು ಎನ್ನುವುದನ್ನು ಬೆಳೆಸುವೆವು
ನೀ ಕಲಿಸಿದ ಏಕತೆ, ಸಹಬಾಳ್ವೆಯ ಪಾಟವ
ನಾವೆಂದೂ ಮರೆಯದೇ ಪಾಲಿಸುವೆವು

ತನ್ನಯ ಇಂಪಾದ, ಸರಳ ಪದಗಳಿಂದಲೇ
ಎಲ್ಲೆಡೆಯೂ ಕೇಳಲಿ ಕನ್ನಡ ನುಡಿ
ನಿನ್ನಯ ಮಕ್ಕಳ ಸಾದನೆಯಿಂದಲೇ
ಆಕಾಶದೆತ್ತರಕ್ಕೆ ಹಾರಾಡಲಿ ಕನ್ನಡದ ಬಾವುಟ

ಓ ಶಿವನೇ ನನ್ನದೊಂದು ಚಿಕ್ಕ ಬೇಡಿಕೆ
ಕರುನಾಡ ತಾಯಿಯ ಮಡಿಲಿನಲ್ಲಿಯೇ
ಮತ್ತೆ ಹುಟ್ಟಬೇಕು ನಾನು

ಎಂದೆಂದಿಗೂ ನನ್ನಯ ನುಡಿ ಕನ್ನಡ, ನಡೆ ಕನ್ನಡ
ನಾನು ಉಸಿರಾಡುವ ಗಾಳಿಯು ಕನ್ನಡ
ನನ್ನಲ್ಲಿ ಹರಿಯುತ್ತಿರುವ ನೆತ್ತರು ಕನ್ನಡ, ಕನ್ನಡ, ಕನ್ನಡ

(ಚಿತ್ರ ಸೆಲೆ:  www.mangaloretips.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *