ಕವಿತೆ: ಒಲವನೇ ಹಂಚೋಣ
ಹಕ್ಕಿಗೆ ಗೂಡಿನಾಸರೆ
ಮೀನಿಗೆ ನೀರಿನಾಸರೆ
ಮೋಡಕೆ ಬಾನಿನಾಸರೆ
ಈ ಬಾಳಿಗೆ ನೀ ನನಗಾಸರೆ
ಮೂಡಿದೆ ಮಂದಹಾಸ
ಉಕ್ಕಿದೆ ಉಲ್ಲಾಸ
ಮನವೆಲ್ಲಾ ಸಂತೋಶ
ನೀ ತಂದದ್ದೇ ಈ ಸಂತಸ
ವರುಶಗಳ ಬಿತ್ತನೆಗೆ
ಹುಟ್ಟಿದೆ ಒಲವಿನ ತೆನೆ
ಇರದಿರಲಿ ಇದಕ್ಕೆಂದಿಗೂ ಕೊನೆ
ಒಲವಿಂದ ತುಳುಕಲಿ ಮನದ ಮನೆ
ಕಲ್ಲು ಮುಳ್ಳು ದಾರಿಯಲ್ಲಿದ್ದದ್ದೇ
ಸಾಗಲಿ ಈ ಪಯಣ ನಿಲ್ಲದೆ
ಒಲವಿಲ್ಲದೇ ಈ ಬೂಮಿ ಉಳಿವುದೇ
ಒಲವನೇ ಹಂಚೋಣ, ಮಿಗಿಲಾದದ್ದೇನಿದೆ?
( ಚಿತ್ರ ಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು