ಕಿರುಗವಿತೆಗಳು

– ನಿತಿನ್ ಗೌಡ.

ಮನದಿಂಚರ

ಮನದ ಇಂಚರ ಪಿಸುಗುಟ್ಟಿದೆ ನಸುನಾಚಿ,
ಸವಿನೆನಪ ಮೆಲುಕು ಹಾಕಿದೊಡನೆ;
ಬಾಸವಾಗುತಿದೆ ಕಳೆದ ಕಾಲದ ಮೇಳ,
ಇನ್ನೂ ಹೊಚ್ಚಹೊಸದೇನೋ‌ ಎಂಬಂತೆ!

ಕಣ್ಮರೆಯಾದೆ

ಕಣ್ಮರೆಯಾದೆ ನೀನು ಮನವೆ,
ಹುಡುಕಾಟಕೆ‌ ನಿಲುಕದೆ!
ತಡವರಿಸುತಿಹೆ ನಾನು‌ ತನುವೆ,
ಸಿಗಲಾರೆಯ ನೀ ಇನ್ನು, ತಡ ಮಾಡದೆ..

ಕಣ್ಣೋಟ

ಕಣ್ಣೋಟಕೂ ಕನಸಂತಿರೋ ಕವನವು ನೀ..
ಆದರೂ ಪಿಸುಗುಡುತಿದೆ ಮನದ ದನಿ ನನಸಲಿ..
ಕಾಯುತಿರಲು ಏರುತಿದೆ ಕಾತುರ, ಎಡೆಬಿಡದೆ..
ಕಂಡ ಕನಸ ನನಸಾಗಿಸಲು, ಇರಲಿ‌ ನಿನ್ನ ಅಂಕಿತ

ನೀ‌‌ ಕಾಣು

ಬ್ರಮೆಯೆಂದೆನಿಸುವುದು ದೇವರು,
ನೀ ಜಗದಲಿ ಅದನು ಕಾಣುವವರೆಗೂ;
ನೀ ಅದನು ಅರಿತೊಡೆ,
ಜಗವೇ ಬ್ರಮೆಯೆಂದೆನಿಸುವುದು ನೀ ಕಾಣು..

( ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: