ಕವಿತೆ: ಒಲವದಾರೆ

– ಕಿಶೋರ್ ಕುಮಾರ್.

ಕೂಗಳತೆಯ ದೂರದಲಿ
ಕೂಗು ಹಾಕಿ ಹೋದವಳೇ
ನಿನ್ನ ಕೂಗಿಗೆ ಕಾಯುತಿರುವೆ
ಕಾಯಿಸದೆ ಬರುವೆಯ

ಮನಸಿನಲ್ಲಿ ಆಸೆ ಹುಟ್ಟಿ
ಹಿರಿದಾಗಿ ಬಿರಿಯುತಿದೆ
ಪ್ರೀತಿ ನೀಡಿ ಉಳಿಸುವೆಯ
ಈ ಇನಿಯನೆದೆಯ

ಪ್ರತಿ ಬಾರಿ ನೆನೆದಾಗ
ನಿನ ನೆನಪೇ ಕಾಡುತಿದೆ
ನಿನ ದಾರಿಯ ಕಾಯುತಿರೋ
ಈ ಜೀವವ ಕಾಪಾಡೆಯ

ನಿನ್ನಲ್ಲಿರೋ ಆ ಸೆಳೆತವೇ
ನನ ಮನವ ಸೆಳೆಯುತಿದೆ
ಈ ಸೆಳೆತದ ಗಾಳಕೆ ಸಿಕ್ಕಿರುವ ಮೀನಾಗಿಹೆ
ಪ್ರೀತಿ ನೀರ ದಾರೆಯೆರೆದು ಉಳಿಸೆಯ

(ಚಿತ್ರ ಸೆಲೆ: unsplash.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: