ಕತೆ: ಬ್ರಮೆ
ಕಾಡಿನ ಅಂಚಿಗೆ ಹತ್ತಿದ ತೋಟದ ಸೆರಗು, ಕಾಡನ್ನು ತೋಟದಿಂದ ಸೀಳುವ ಗಡಿ ಅಲ್ಲಿರುವ ಬೇಲಿಯಶ್ಟೇ.
“ನಾನು ವಾಸಿಸುವ ಜಾಗವನ್ನು ನೀನು ಆಕ್ರಮಿಸಿದರೆ ನಾನೇನು ಮಾಡಲಿ? ಆಹಾರದ ಕೊರತೆ ಇದೆ. ದೊಡ್ಡ ಹೊಟ್ಟೆಯ ನಾನು ಆಹಾರಕ್ಕಾಗಿ ತೋಟಕ್ಕೆ ದಾಳಿ ಇಟ್ಟಿದ್ದೇನೆ”. ಆದರೆ ತೋಟದ ಮಾಲಿಕ ಸುಮ್ಮಿನಿದ್ದಾನ? ಆನೆಯ ಮೇಲೆ ತೋಟದ ಕೋವಿ ಎತ್ತಿ ಡಂ ಎನಿಸಿಬಿಟ್ಟ. ಗುಂಡಿನ ಏಟು ಬಿದ್ದು ತಿಂಗಳು ಕಳೆದಿದೆ, ಅದು ಸತ್ತಿಲ್ಲ! ಹಾರಿದ ಗುಂಡಿನಿಂದ ಗಾಯವಾಗಿ ಹುಳ ಗಿಜುಗುಡುತ್ತಿದೆ. ರೊಚ್ಚಿಗೆದ್ದ ಆನೆ ಮನುಶ್ಯರ ಮನೆಗಳ ಮೇಲೆ ದಾಳಿ ಇಡುತ್ತಿದೆ.
ಅದೇ ಗುಂಗಿನಲ್ಲಿ ಮಲಗಿದ್ದೆ ನಾನು. ಮದ್ಯರಾತ್ರಿ ಎಲ್ಲೆಲ್ಲೂ ನಿಶಬ್ದ. ನಮ್ಮಪ್ಪ “ಏ ಎಚ್ಚರ ಆಗು, ಸದ್ದು ಮಾಡಬೇಡ. ಹಿತ್ತಲಿಗೆ ಆನೆ ನುಗ್ಗಿದ ಹಾಗೆ ಕಾಣ್ಸುತ್ತೆ, ನೋಡು… ಟಪ ಟಪ ಸದ್ದು ಬಾಳೆ ಗಿಡ ಮುರೀತಿದೆ” ಎಂದರು.
ನಾವೆಲ್ಲ ದೀಪ ಆರಿಸಿ ಬೆಳಗಾಗುವವರೆಗೂ ನಡು ಮನೆಯಲ್ಲಿ ದುಂಡಗೆ ಕುಳಿತೆವು. ಎಲ್ಲರಿಗೂ ಆತಂಕ. ಆನೆ ಎಲ್ಲಿ ಮನೆಗೆ ನುಗ್ಗಿ ನಮ್ಮ ಪ್ರಾಣಕ್ಕೆಲ್ಲಿ ಎರವಾಗುತ್ತದೋ ಎಂದು. ಬಯದಲ್ಲೆ ಬೆಳಕು ಹರಿಸಿದ ನಾವು ಮೆತ್ತಗೆ ಕಿಟಕಿ ಸರಿಸಿ ನೋಡಿದರೆ ಆನೆ ಕಾಣುತ್ತಿಲ್ಲ. ಹಾಗಾದಾರೆ ಸದ್ದು ಏನು ಎಂದು ನಾನು ಸಂಶೋದನೆಗೆ ಇಳಿದೆ. ಮಳೆಯ ಹನಿ ಒಂದು ಬಾಳೆ ಎಲೆಯಿಂದ ಇನ್ನೊಂದು ಬಾಳೆ ಎಲೆಗೆ ಬಿದ್ದು ಟಪ ಟಪ ಸದ್ದು ಮಾಡುತ್ತಿದೆ! ಬ್ರಮೆ ನೋಡಿ ಹೇಗೆ ಬಯವಾಗಿ ಕಾಡಿತು. ಬ್ರಮೆಯಲ್ಲಿ ಹಗ್ಗವೂ ಹಾವಾಗುತ್ತದೆ!
(ಚಿತ್ರಸೆಲೆ: okwxlab.blogspot.in )
ಇತ್ತೀಚಿನ ಅನಿಸಿಕೆಗಳು