ಕವಿತೆ: ಸಂತ್ರುಪ್ತ ಬಾವ

– ಮಹೇಶ ಸಿ. ಸಿ.

Life, ಬದುಕು

ಮೌನ ತೇರು ಸಾಗಿದೆ
ನೋಡು ಮರೆಯಲಿ
ಅಲೆಯೋ ಮನಸು ಶಾಂತವೀಗ
ನನ್ನ ಮನದಲಿ

ಮೇಗದಲ್ಲಿ ಅವಿತ ಶಶಿಯ
ನೇತ್ರ ಹುಡುಕುತ
ಕುಳಿತೆ ನಾನು ಚಳಿಯ ನಡುವೆ
ಕಾಪಿ ಹೀರುತ

ಪರದೆ ಸರಿಸಿ ಬಾನಿನೆಡೆಗೆ
ದ್ರುಶ್ಟಿ ನೆಟ್ಟೆನು
ತಂಗಾಳಿಯೂ ತಿಳಿಸಿತ್ತು ಮೊದಲೇ
ಮಳೆಯು ಬರುವ ಗುಟ್ಟನು

ಗುನುಗುತಿತ್ತು ಮದುರಗೀತೆ
ಕರ‍್ಣದೊಳಗಡೆ
ಮನಸು ಓಡುತಿತ್ತು ಹಳೆಯ
ನೆನಪಿನೊಳಗಡೆ

ಕ್ರಿಶ್ಣಮೋಡ ಸುರಿಸುತಿಹುದು
ಮುತ್ತಿನ ಹನಿಗಳ
ತಂಪನೆರೆದು ವರುಣ ಸೋಕ
ನನ್ನ ಕಂಗಳ

ಸಂತ್ರುಪ್ತಿಯಿಂದ ಗಿಡಮರಗಳು
ಬಳುಕಾಡಿ ತೂಗಿತು
ಸುಂದರ ಕ್ಶಣದಿಂದ ಮ್ರುದುಲಬಾವ
ನನ್ನ ಮನವ ತುಂಬಿತು.

(ಚಿತ್ರ ಸೆಲೆ: fearlessmotivation.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: