ಬೇಸಿಗೆಯ ಗೆಳೆಯ ಮಾವಿನ ಹಣ್ಣಿನ ಜ್ಯೂಸ್
ಏನೇನು ಬೇಕು
- ಮಾವಿನ ಹಣ್ಣು – 2
- ಸಕ್ಕರೆ – 5-6 ಚಮಚ
- ಐಸ್ ಕ್ಯೂಬ್ಸ್ – ಅಗತ್ಯವಿರುವಶ್ಟು
- ನೀರು – 1 ಗ್ಲಾಸ್
ಮಾಡುವ ಬಗೆ:
ಮೊದಲಿಗೆ ಸಿಪ್ಪೆ ತೆಗೆದ (ಪೂರ್‍ತಿ ಹಣ್ಣಾದ) ಮಾವಿನ ಹಣ್ಣಿನ ತಿರುಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಮಿಕ್ಸಿ ಜಾರ್ ಗೆ ಹಾಕಿಕೊಳ್ಳಿರಿ. ನಂತರ ಸಕ್ಕರೆ, ಐಸ್ ಕ್ಯೂಬ್ಸ್, ನೀರು ಸೇರಿಸಿ ಚೆನ್ನಾಗಿ ರುಬ್ಬಿದರೆ ರುಚಿಯಾದ ಮಾವಿನ ಹಣ್ಣಿನ ಜ್ಯೂಸ್ ಸಿದ್ದವಾಗುತ್ತದೆ.
ಅಂಗಡಿ ಮಳಿಗೆಗಳಲ್ಲಿ ದೊರೆಯುವ ಮಾವಿನ ಹಣ್ಣಿನ ಕ್ರುತಕ ಪಾನೀಯಗಳಿಗೆ ಕ್ರುತಕ ಬಣ್ಣ, ರುಚಿ, ಪರಿಮಳದ ಜೊತೆಗೆ ದೀರ‍್ಗಕಾಲ ಕೆಡದಿರಲು ಸಂರಕ್ಶಕಗಳನ್ನು ಸೇರಿಸಿರುತ್ತಾರೆ. ಇವುಗಳನ್ನು ಕುಡಿಯುವುದರಿಂದ ನಮ್ಮ ಶರೀರದ ಸ್ವಾಸ್ತ್ಯಕ್ಕೆ ನಿದಾನವಾಗಿ ಹಾನಿಯಾಗುತ್ತದೆ. ಆದ್ದರಿಂದ ಮನೆಯಲ್ಲೇ ಮಾವಿನ ಹಣ್ಣುಗಳನ್ನು ಬಳಸಿ ರುಚಿಯಾದ ತಾಜಾ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ದೇಹಕ್ಕೆ ಹಿತ. ಹಾಗೆಯೇ ಬೇಸಿಗೆಯ ದಾಹವನ್ನು ಕಡಿಮೆ ಮಾಡಿಕೊಳ್ಳಬಹುದು.
(ಚಿತ್ರಸೆಲೆ: ಬರಹಗಾರರು)
ಇತ್ತೀಚಿನ ಅನಿಸಿಕೆಗಳು