ಕವಿತೆ: ನಂಬಿಕೆಯ ಗಿಡ
ಪ್ರತಿ ದಿನವೂ ನಂಬಿಕೆಯ
ಗಿಡಕೆ ನೀರನೆರೆದೆ ನೀನು
ಆ ನಂಬಿಕೆಯ ಮರದಡಿ
ನಾನಿರುವೆ, ನೀನೇ ಇಲ್ಲ
ಉಸಿರು ನಿಲ್ಲುವವರೆಗೂ
ನೆನೆಯುವ ನೆನಪುಗಳ
ನೀಡಿ ಹೊರಟಿರುವೆ
ಆ ನೆನಪುಗಳೇ ಸಿಹಿ ಬೆಲ್ಲ
ಬಿಡುವಿದ್ದಾಗ ನೆನೆದವನಲ್ಲ
ನೆನೆಯಲೆಂದೇ ಬಿಡುವು
ಮಾಡಿಕೊಂಡವನು ನಾನು
ನನ್ನ ಬಿಟ್ಟು ಹೋದೆಯಲ್ಲ
ಬದುಕೆಲ್ಲ ನೆನಪಿಡುವ
ಗಾಯವ ಮಾಡಿರುವೆ
ಗಾಯ ಮಾಗಬಹುದು
ಗಾಯದ ಕಲೆಯಲ್ಲ.
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು