ರೊಟ್ಟಿ ಮುಟಗಿ
– ರೂಪಾ ಪಾಟೀಲ್.
ಬೇಕಾಗುವ ಸಾಮಾನುಗಳು
- ಜೋಳದ ರೊಟ್ಟಿ – 1
- ಬೆಳ್ಳುಳ್ಳಿ – 5-6 ಎಸಳು
- ತುಪ್ಪ – 2 ಚಮಚ
- ಉಪ್ಪು – ರುಚಿಗೆ ತಕ್ಕಶ್ಟು
- ಹಸಿಮೆಣಸಿನಕಾಯಿ ಇಲ್ಲವೇ ಒಣಮೆಣಸಿನಕಾಯಿ ಪುಡಿ – ಸ್ವಲ್ಪ
ಮಾಡುವ ಬಗೆ
ಮೊದಲು ಜೋಳದ ರೊಟ್ಟಿ ತಯಾರಿಸಿ ಇಟ್ಟುಕೊಳ್ಳಿ. ಹಸಿ ಮೆಣಸಿನಕಾಯಿ ಬಳಸುವುದಾದರೆ ಮೊದಲೇ ಜಜ್ಜಿ ಪೇಸ್ಟ್ ಮಾಡಿಟ್ಟುಕೊಳ್ಳಿ. ಬಿಸಿಬಿಸಿಯಾದ ಜೋಳದ ರೊಟ್ಟಿಯನ್ನು ಬಿಡಿಸಿದ ಬೆಳ್ಳುಳ್ಳಿ ಎಸಳು, ಉಪ್ಪು, ಕಾರ, ಮತ್ತು ತುಪ್ಪವನ್ನು ರೊಟ್ಟಿಗೆ ಸೇರಿಸಿ, ಸ್ವಲ್ಪ ಹದವಾಗುವಂತೆ ಕುಟ್ಟಿ ಅತವಾ ಕೈಯಿಂದ ಹದ ಮಾಡಿಕೊಂಡು ಉಂಡೆ ಆಕಾರದಲ್ಲಿ ಮಾಡಿಕೊಂಡರೆ ರೊಟ್ಟಿ ಮುಟಗಿ/ಮುದ್ದೆ ತಯಾರು. ಇದನ್ನು ಬಿಸಿಯಾಗಿರುವಾಗಲೇ ತಿಂದರೆ ಅದ್ಬುತ ರುಚಿ ಬರುತ್ತದೆ.
(ಚಿತ್ರ ಸೆಲೆ: ytimg.com)
ಇತ್ತೀಚಿನ ಅನಿಸಿಕೆಗಳು