ಕವಿತೆ: ನನ್ನ ದೊರೆ

– ಮಹೇಶ ಸಿ. ಸಿ.

ಅಪ್ಪನೆಂದರೆ ಆಕಾಶ ತಾನೆ
ಸ್ಪೂರ‍್ತಿಯ ವ್ಯಕ್ತಿತ್ವದವನೇ
ನನ್ನ ಜಗದ ದೊರೆಯು ನೀನು
ನಮ್ಮ ಕಾಯುವ ಯೋದನು

ನಿನ್ನ ಮೈಯ ಬೆವರ ಹನಿಯು
ಹಸಿದ ಚೀಲವ ತುಂಬಿದೆ
ಪ್ರೀತಿಗೆಂದೂ ಕೊರತೆಯಿಲ್ಲ
ಚಿಂತೆ ಮಾತು ದೂರವಾಗಿದೆ

ನೋವಿನಲ್ಲೂ ನಗುವ ನಿನ್ನ
ಮೊಗದ ಚಾಯಯೇ ಚೆಂದವೂ
ಒಮ್ಮೆ ನೋಡಲು ಸಾಕು ನಿನ್ನನು
ಮನದ ತುಮುಲವೆಲ್ಲಾ ಮಾಯವೂ

ಇಟ್ಟ ಹೆಜ್ಜೆ ಹಿಂದೆ ಇಡೆನು
ಬೆನ್ನ ಹಿಂದೆ ನೀನಿದ್ದರೆ
ಸ್ವಾರ‍್ತ ಜಗವ ಗೆಲ್ಲುವೆ ನಾನು
ನಿನ್ನ ದೈರ‍್ಯ ಕಲಿತುಕೊಂಡರೆ

ದಾರಿದೀಪ ನೀವೆ ನಮಗೆ
ಕುಶಿಯ ತುಂಬಿದ ಮನಗಳು
ಅಮ್ಮ ಶಶಿಯು ನೀನು ರವಿಯು
ಬಾಳಿನೆರಡು ಕಂಗಳು.

(ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications