ಕವಿತೆ: ನನ್ನ ಪ್ರಪಂಚಕೆ ದೊರೆ ನೀನೆ ಅಪ್ಪ

– ಮಹೇಶ ಸಿ. ಸಿ.

ಅಸೂಯೆ ತುಂಬಿದ ಕಾಲ ಉರುಳಿ
ಸಮಯವೀಗ ಬದಲಾಗಿದೆ
ನಮ್ಮ ಮನೆಯ ನಂದಾದೀಪ
ಬಿರುಗಾಳಿಗೆ ಆರಿ ಹೋಗಿದೆ

ತಪ್ಪು ನಡೆದಾಗ ತಿದ್ದುವ
ನಿನ್ನ ಮೇಲೆ ನನಗಾಗ ಕೋಪವು
ತಪ್ಪಿನ ಅರಿವಾದಾಗ ನನಗೆ
ನೀನಿಲ್ಲದ ಪರಿತಾಪವು

ಜಗವ ತೋರಿಸಿದಾತ ನೀನು
ನಿನ್ನ ತಿಳಿಯದೆ ಹೋದೆನು
ಬಾಳ ದಾರಿಯ ಮದ್ಯದಲ್ಲಿ
ಬಿಟ್ಟು ಹೋದೆಯಾ ನಮ್ಮನು

ಮತ್ತೆ ಸಿಗಲು ನೀನು ನಮಗೆ
ಯಾವ ದೇವನ ಬೇಡಲಿ
ಕಾಲಿಯಾದ ನಿನ್ನ ಸ್ತಾನ
ತುಂಬಲು ಸಾದ್ಯವಿಲ್ಲ ನನ್ನಲಿ

ಅಪ್ಪ ನಿನ್ನ ನೆನೆದು ಮನವು
ಸೊರಗಿ ಮಂಕಾಗಿದೆ
ಪೂರ‍್ವ ಗಟನೆಯ ಬಂಡಾರವೀಗ
ನನ್ನ ಚಿತ್ತದಲ್ಲಿ ತುಂಬಿದೆ

ಮಿಂಚಿ ಹೋದ ಕಾಲದಲ್ಲಿ
ನಿನ್ನನರಿಯದ ನನ್ನ ತಪ್ಪಾ
ನನಗೆ ಈಗ ತಿಳಿದ ಸತ್ಯ
ನನ್ನ ಪ್ರಪಂಚಕೆ ದೊರೆ ನೀನೆ ಅಪ್ಪ

(ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: