ನಂಜುಕಳೆತ ಮತ್ತು ಮನೆಮದ್ದುಗಳು
ಇತ್ತೀಚೆಗೆ ನಂಜುಕಳೆತ (Detoxification) ದ ಬಗ್ಗೆ ಕೇಳುತ್ತಿರುತ್ತೇವೆ. ಈಗಿನ ಜೀವನ ಶೈಲಿ ಮತ್ತು ಆಹಾರ ಪದ್ದತಿಯಿಂದ ನಂಜುಕಳೆತ ಬಗ್ಗೆ ತುಂಬಾ ಕಾಳಜಿವಹಿಸುವಂತಾಗಿದೆ. ದೇಹದಲ್ಲಿರುವ ವಿಶಕಾರಿ (Toxins) ಅಂಶಗಳನ್ನು ಹೊರಹಾಕುವ ಪ್ರಕ್ರಿಯೆಗೆ ನಂಜುಕಳೆತ ಎನ್ನಲಾಗುತ್ತದೆ. ಈ ಕೆಲಸವನ್ನು ಮಾಡವುದು ಈಲಿ (Liver) ಮತ್ತು ಮೂತ್ರ ಪಿಂಡಗಳು (Kidneys).
ದೇಹದ ನಂಜುಕಳೆತ ಅತವಾ ಶುದ್ದೀಕರಿಸುವುದು ಆರೋಗ್ಯಕರ ಜೀವನಶೈಲಿಗೆ ಮುಕ್ಯವಾಗಿದೆ. ಇದಕ್ಕೆ ಸಹಾಯ ಮಾಡುವ ಕೆಲವು ಮನೆಮದ್ದುಗಳ ಬಗ್ಗೆ ತಿಳಿಯೋಣ, ತಜ್ನರ ಪ್ರಕಾರ ಈ ಮನೆಮದ್ದುಗಳು ಸಹಜವಾಗಿಯೇ ನಮ್ಮ ದೇಹದ ನಂಜುಕಳೆತಕ್ಕೆ ಸಹಾಯ ಮಾಡುತ್ತವೆ.
ಎಳನೀರು: ಇದು ದೇಹವನ್ನು ನೀರರಳು (Hydrate) ಮಾಡುತ್ತದೆ ಮತ್ತು ವಿಶಕಾರಿ (Toxins) ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.
ನಿಂಬೆ ಹಣ್ಣು: ಬಿಸಿನೀರಿನಲ್ಲಿ ನಿಂಬೆ ರಸವನ್ನು ಕುಡಿಯುವುದು ಈಲಿ (Liver) ನಂಜುಕಳೆತಕ್ಕೆ ಸಹಾಯ ಮಾಡುತ್ತದೆ.
ಹಸಿರು ಎಲೆಕೋಸಿನ ಜ್ಯೂಸ್: ಇದು ಈಲಿ (Liver) ನಂಜುಕಳೆತಕ್ಕೆ ಸಹಾಯ ಮಾಡುತ್ತದೆ.
ಅರಿಶಿಣ ಮತ್ತು ಹಾಲು: ಪ್ರತಿದಿನ ರಾತ್ರಿ ಅರಿಶಿಣ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಕುಡಿಯುವುದು ರಕ್ತದ ಕೊಳವೆಗಳನ್ನು ಶುದ್ದೀಕರಿಸುತ್ತದೆ.
ತಂಜಿ ಹಣ್ಣು (Avocado): ಇದು ಈಲಿ ಕಾರ್‍ಯ ಸುದಾರಣೆಗೆ ಸಹಾಯಕವಾಗಿದೆ.
ಮೆಂತೆ ನೀರು: ಮೆಂತೆ ಬೀಜಗಳನ್ನು ರಾತ್ರಿ ನೀರಲ್ಲಿ ನೆನೆಸಿಸಿ, ಬೆಳಿಗ್ಗೆ ಈ ನೀರನ್ನು ಕುಡಿಯುವುದು ಜೀರ‍್ಣಕ್ರಿಯೆಯನ್ನು ಸುದಾರಿಸುತ್ತದೆ.
ಪುದೀನಾ: ಪುದೀನಾ ಎಲೆಗಳನ್ನು ಉದುಕಿಸಿದ ನೀರು ಕುಡಿಯುವುದು ದೇಹವನ್ನು ತಾಜಾ ಹಾಗೂ ಶುದ್ದೀಕರಿಸಲು ಸಹಾಯ ಮಾಡುತ್ತದೆ.
ಕಾಮಲೆಗೆ (Aloe Vera) ಜ್ಯೂಸ್: ಕಾಮಲೆಗೆ ರಸವು ಜೀರ‍್ಣಕ್ರಿಯೆಯನ್ನು ಸುದಾರಿಸುತ್ತದೆ ಮತ್ತು ದೇಹದ ನಂಜುಕಳೆತ ಪ್ರಕ್ರಿಯೆಗೆ ಸಹಕಾರಿ.
ಈ ಮನೆಮದ್ದುಗಳು ನೈಸರ‍್ಗಿಕವಾಗಿದ್ದು, ದಿನನಿತ್ಯದ ಆಹಾರ ಪ್ರಕ್ರಿಯೆಯಲ್ಲಿ ಸೇರಿಸಿಕೊಳ್ಳಲು ಸುಲಬವಾಗಿವೆ.
ಸೂಚನೆ: ಯಾವುದೇ ಹೊಸ ನಂಜುಕಳೆತ ಅಬ್ಯಾಸವನ್ನು ಶುರು ಮಾಡುವ ಮೊದಲು ವೈದ್ಯರ ಸಲಹೆ ಪಡೆದುಕೊಳ್ಳುವುದು ಉತ್ತಮ.
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು