ಕಡಲೆ ಪುರಿ ದೋಸೆ

– ಸವಿತಾ.

ಏನೇನು ಬೇಕು

  • ಕಡಲೆ ಪುರಿ – 2 ಲೋಟ
  • ಸಣ್ಣ ರವೆ – 1 ಲೋಟ
  • ಉದ್ದಿನ ಬೇಳೆ – 2 ಚಮಚ
  • ಮೆಂತೆ ಕಾಳು – 2 ಚಮಚ

ಮಾಡುವ ಬಗೆ

ಉದ್ದಿನ ಬೇಳೆ ಮತ್ತು ಮೆಂತೆ ಕಾಳು ತೊಳೆದು ನೀರು ಹಾಕಿ ಎರಡು ಗಂಟೆ ನೆನೆಯಲು ಇ‍ಡಿ. ನಂತರ ರವೆ ಮತ್ತು ಕಡಲೆ ಪುರಿಯನ್ನು ನೀರಿನಲ್ಲಿ ತೊಳೆದು ಮಿಕ್ಸರ್ ನಲ್ಲಿ ರುಬ್ಬಬೇಕು. ಆಮೇಲೆ ಉದ್ದಿನ ಬೇಳೆ, ಮೆಂತೆ ಕಾಳು ರುಬ್ಬಿ, ಸ್ವಲ್ಪ ಉಪ್ಪು, ಸ್ವಲ್ಪ ನೀರು ಹಾಗೂ ರುಬ್ಬಿ ಇಟ್ಟಿದ್ದ ರವೆ ಮತ್ತು ಕಡಲೆ ಪುರಿಯನ್ನು ಸೇರಿಸಿ ಕೈಯಾಡಿಸಿ, ದೋಸೆ ಹದಕ್ಕೆ ಹಿಟ್ಟು ತಯಾರಿಸಿ ಇಟ್ಟುಕೊಳ್ಳಿ. ಕಾದ ತವೆಯ ಮೇಲೆ ಸ್ವಲ್ಪ ಎಣ್ಣೆ ಹಾಕಿ, ದೋಸೆಯ ಎರಡೂ ಬದಿ ಬೇಯಿಸಿ ತೆಗೆಯಿರಿ. ಈಗ ಕಡಲೆ ಪುರಿ (ಚುರುಮುರಿ) ದೋಸೆ ಸವಿಯಲು ಸಿದ್ದ. ಕೊಬ್ಬರಿ ಚಟ್ನಿ ಜೊತೆ ಸವಿದರೆ ಇನ್ನೂ ಚೆನ್ನ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications