ಮಕ್ಕಳಿಗೆ ಇಶ್ಟವಾಗುವ ಐಸು

– ಸವಿತಾ.

ಏನೇನು ಬೇಕು

ನೀರು – 3 ಲೋಟ
ಸಕ್ಕರೆ – 4 ಚಮಚ
ಉಪ್ಪು – 1/4 ಚಮಚ
ಏಲಕ್ಕಿ – 1
ನಿಂಬೆ ಹಣ್ಣಿನ ಸಿಪ್ಪೆ – 1/2 ಹೋಳು (ಸಿಪ್ಪೆ ಮಾತ್ರ)

ಮಾಡುವ ಬಗೆ

ನಿಂಬೆ ಹಣ್ಣಿನ ಸಿಪ್ಪೆ ತೆಗೆದು ಇಟ್ಟುಕೊಳ್ಳಿ. ನೀರು ಬಿಸಿ ಮಾಡಿ ನಿಂಬೆ ಹಣ್ಣಿನ ಸಿಪ್ಪೆ ಹಾಕಿ ಸಕ್ಕರೆ, ಉಪ್ಪು, ಏಲಕ್ಕಿ ಪುಡಿ ಸೇರಿಸಿ ಒಂದು ಕುದಿ ಕುದಿಸಿ ಆರಿಸಿ. ಸಕ್ಕರೆ ಕರಗುವವರೆಗೆ ಕುದಿಸಿ ಇಳಿಸಿ. ಆರಿದ ನಂತರ ಸಣ್ಣ ಬಟ್ಟಲು ಅತವಾ ಲೋಟದಲ್ಲಿ (ಐಸ್ ಕ್ರೀಮ್ ಕಡ್ಡಿ ಇದ್ದ‍ರೆ ಸೇರಿಸಿ) ಹಾಕಿ ರೆಪ್ರೀಜರೇಟರ್ ನಲ್ಲಿ ಐಸ್ ಆಗಲು ಒಂದು ದಿನ ಇಡಬೇಕು. (ಐಸ್ ಟ್ರೇ ನಲ್ಲಿ ಇಡಬಹುದು) ಮರುದಿನ ತೆಗೆದು ತಣ್ಣನೆಯ ಐಸ್ ಸವಿಯಿರಿ. ಮಕ್ಕಳಿಗೆ ತುಂಬಾ ಇಶ್ಟವಾಗುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: