ಕವಿತೆ: ಪ್ರೀತಿಯ ಒರತೆ
ನಡೆದು ಬಂದಾಯ್ತು ಬಲು
ದೂರ ಯಾವುದೇ ಅಪೇಕ್ಶೆಗಳಿಲ್ಲದೆ
ಸಂದಿಸುವ ಕಣ್ಣಲ್ಲಿ ಪ್ರೀತಿಯ ಒರತೆ
ಬಿಟ್ಟರೆ ಮತ್ತೆಲ್ಲವೂ ಗೌಣ
ನಾವು ಬೇಡಲಿಲ್ಲ ಸಿರಿ-ದನ-ಕನಕಗಳ
ನೆಮ್ಮದಿಯ ಬದುಕಿಗೆ ಎಂದೂ
ಅಡ್ಡಿಯಾಗಿಲ್ಲ… ಅವಿಲ್ಲದ ಕೊರತೆಗಳ
ಈ ಕೊರತೆಗಳಿಗೆ ಪ್ರೀತಿಯೇ ಒರತೆಯಾಗಿ
ತುಂಬಿ ತುಂಬಿ ಕೊಟ್ಟಿತಲ್ಲ
ಇಂದು ಸತ್ಯ, ನಾಳೆಗಳು ಮಿತ್ಯೆ
ಬದುಕು ಎತ್ತಿನ ಬಂಡಿ
ಜೋಡೆತ್ತುಗಳು ಎಳೆದೇ ತೀರಬೇಕು
ನಿತ್ಯ ಪ್ರೀತಿಯ ತುಂಬಿ
ಹೀಗೆ ಇರಲಿ ಬದುಕು ಸಂತಸದೀ
ಇಲ್ಲದ ಮಹಲುಗಳ ಕಟ್ಟಲು ನಿತ್ಯ
ಕಲ್ಲು ಕೂಡಿ ಹಾಕುವ ಬರದಿ
ಕಳೆದುಕೊಳ್ಳುವ ಪ್ರೀತಿಯ
ಅಳಿದು ಹೋಗುವ ನೆಮ್ಮದಿಯ
ಸತ್ಯ ದರ‍್ಶನಕೆ
(ಚಿತ್ರ ಸೆಲೆ: pxhere.com)
ಇತ್ತೀಚಿನ ಅನಿಸಿಕೆಗಳು