ಹನಿಗವನಗಳು
– ವೆಂಕಟೇಶ ಚಾಗಿ.
***ಗಾಳ***
ಯಾರೋ ಬೀಸಿದ
ಗಾಳಕ್ಕೆ
ಜನರು ಬಲಿ!
***ಆಮಿಶ***
ಉಚಿತ ನೀಡಲು
ಏನೂ ಉಳಿದಿಲ್ಲ
ನೈತಿಕತೆಯನ್ನೂ
ಕರೀದಿಸಲಾಗಿದೆ!
***ಬಿಸಿಲು***
ಬಾರೀ ಮಳೆಯಂತೆ
ಬಾರೀ ಬಿಸಿಲು
ಕಾಲ ಎಲ್ಲರಿಗೂ!
***ತಂಗಾಳಿ***
ತಂಗಾಳಿಯೂ ಸುಟ್ಟು
ಬಿಸಿಯಾಗಿದೆ
ರಾತ್ರಿಯಲ್ಲೂ!
***ಮಳೆ ಕೊಯ್ಲು***
ಬೆಳೆ ಬಂದಾಗ
ಬೆಳೆಕೊಯ್ಲು
ಮಳೆ ಬರಲು
ಮಳೆಕೊಯ್ಲು!
(ಚಿತ್ರ ಸೆಲೆ: ecosalon.com)
ಇತ್ತೀಚಿನ ಅನಿಸಿಕೆಗಳು