ಚುಟುಕು ಕವಿತೆಗಳು
– ಸವಿತಾ.
*** ಕೊನೆಯಾದವಳು ***
ವಿದಿಯಾಟದಲ್ಲಿ
ಕೊನೆಯಾದಳು
ನೆನಪಿನ ಗೋರಿಯಲ್ಲಿ
ಹಸಿರಾಗಿರುವಳು
*** ಪ್ರೇಮ ಚಂದ್ರಿಕೆ ***
ಕಂಗಳ ಒಲವಲಿ
ಹೊಂಗನಸು ಮನೆ ಮಾಡಿ
ಜೀಕುತಿಹುದು ಪ್ರೇಮದುಯ್ಯಾಲೆ
ಬೆಳದಿಂಗಳ ರಾತ್ರಿಯನೂ
ನಾಚಿಸುತಿಹಳು ಪ್ರೇಮ ಚಂದ್ರಿಕೆ
*** ಶಾಂತ ಬುದ್ದ ***
ಶಾಂತಿ ಅರಸಿದ ಬುದ್ದ
ಪಟದಲ್ಲೂ ಶಾಂತ ಇದ್ದ
ಜನರ ಕಿತ್ತಾಟ, ಹಾರಾಟ, ಬಾಶಣ ಮಾತ್ರ
ನಡೆದದ್ದು ಬುದ್ದ ಜಯಂತಿ ನಿಮಿತ್ತ
(ಚಿತ್ರ ಸೆಲೆ: ecosalon.com)
ಇತ್ತೀಚಿನ ಅನಿಸಿಕೆಗಳು